alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದ ಬಳಿ ಚಿಲ್ಲರೆ ಕೇಳಿದ ಸರ್ಕಾರ

mandir

500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ನಿಷೇದವಾಗ್ತಿದ್ದಂತೆ 100, 50, 10 ರೂಪಾಯಿ ಮುಖ ಬೆಲೆಯ ನೋಟುಗಳಿಗೆ ಬೇಡಿಕೆ ಹೆಚ್ಚಾಗಿದೆ. ನೋಟಿನ ಸಮಸ್ಯೆ ನೀಗಿಸಲು ಸರ್ಕಾರ ದೇವರ ಮೊರೆ ಹೋಗಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದ ವಿತ್ತ ಸಚಿವರು, ದೇವಸ್ಥಾನಗಳ ಆಡಳಿತ ಮಂಡಳಿಗೆ ವಿನಂತಿ ಮಾಡಿದ್ದಾರೆ.

ದೇವಸ್ಥಾನದ ಹುಂಡಿಯನ್ನು ತೆಗೆದು ಅದರಲ್ಲಿರುವ ಚಿಲ್ಲರೆಗಳನ್ನು ಸ್ಥಳೀಯ ಬ್ಯಾಂಕ್ ಗೆ ಜಮಾ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಆದ್ರೆ ದೇವಸ್ಥಾನದ ಆಡಳಿತ ಮಂಡಳಿ ಎಷ್ಟು ಹಣವನ್ನು ಜಮಾ ಮಾಡಬಹುದೆಂಬ ಬಗ್ಗೆ ಯಾವುದೇ ನಿಯಮ ರೂಪಿಸಿಲ್ಲ.

ಸರ್ಕಾರ, ಹಣ ಜಮಾವಣೆ ಮಾಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಹೇಳ್ತಾ ಇದ್ದರೆ ದೇವಸ್ಥಾನದ ಮುಂದೆ ಅಳವಡಿಸಿರುವ ಬೋರ್ಡ್ ಆಶ್ಚರ್ಯ ಹುಟ್ಟಿಸುವಂತಿದೆ. ದೇಶದ ಬೇರೆ ಬೇರೆ ಮಂದಿರ ಹಾಗೂ ಚರ್ಚ್ ಗಳಲ್ಲಿ ದೊಡ್ಡ ಬೋರ್ಡ್ ಹಾಕಲಾಗಿದೆ. ದಯವಿಟ್ಟು 500 ಹಾಗೂ 1000 ರೂ. ನೋಟುಗಳನ್ನು ಹುಂಡಿಗೆ ಹಾಕಬೇಡಿ ಎಂದು ವಿನಂತಿ ಮಾಡಲಾಗಿದೆ.

ದೇವಸ್ಥಾನದ ಹುಂಡಿಯ ಉಸ್ತುವಾರಿ ನೋಡಿಕೊಳ್ಳುವ ಪೂಜಾರಿ ಜೊತೆ ಒಪ್ಪಂದ ಮಾಡಿಕೊಂಡು ಕೆಲವರು ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ಆದ್ರೆ ಅದಕ್ಕೂ ಈಗ ಕಡಿವಾಣ ಬಿದ್ದಿದೆ. ಈ ನಡುವೆ ಕೊಚ್ಚಿಯ ಚರ್ಚೊಂದು ಮೆಚ್ಚುಗೆಯ ಕೆಲಸ ಮಾಡಿದೆ. ಭಾನುವಾರ ಪ್ರಾರ್ಥನೆ ಸಮಯದಲ್ಲಿ ಚರ್ಚ್ ಹುಂಡಿ ತೆರೆದಿದೆ. ದಿನನಿತ್ಯದ ಬಳಕೆಗೆ ಹಣದ ಅವಶ್ಯಕತೆ ಇರುವವರು ಕ್ಯಾಶ್ ಬಾಕ್ಸ್ ನಿಂದ ಹಣ ಪಡೆಯಬಹುದೆಂದು ಸೂಚನೆ ನೀಡಿತ್ತು. ವಿಶೇಷವೆಂದ್ರೆ ಹಣ ಪಡೆದವರಿಂದ ಚರ್ಚ್ ಯಾವುದೇ ದಾಖಲೆ ಪಡೆಯಲಿಲ್ಲ. ಜೊತೆಗೆ ಎಷ್ಟು ಹಣ ಪಡೆದಿದ್ದಾರೆನ್ನುವ ಬಗ್ಗೆ ಪರಿಶೀಲನೆ ನಡೆಸಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...