alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ವೈರಲ್ ಆಯ್ತು ಸಿಎಂಗಾಗಿ ದಿವ್ಯಾಂಗ ಹಾಡಿದ ಹಾಡು

ಭಾಷೆ ಬರಲಿ ಬಿಡಲಿ ಕೆಲವೊಂದು ಹಾಡಿನ ಭಾವನೆ ಹಾಡನ್ನು ಅರ್ಥ ಮಾಡಿಸುತ್ತದೆ. ಇಂಥಹದ್ದೇ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿಮಾಚಲ ಪ್ರದೇಶ ಸಾರಜ್ ವಿಧಾನಸಭೆಯ ದಿವ್ಯಾಂಗ ವ್ಯಕ್ತಿಯೊಬ್ಬ ಈ ಹಾಡನ್ನು ಹಾಡಿದ್ದಾನೆ. ಸಿಎಂ ಜಯರಾಮ್ ಠಾಕೂರ್ ಹಾಗೂ ಅವರ ಧರ್ಮಪತ್ನಿ ಡಾ. ಸಾಧನಾ ಠಾಕೂರ್ ಬಗ್ಗೆ ಈ ಹಾಡಿದೆ. ವಿಶ್ರಾಂತಿ ವೇಳೆ ಕಾರ್ಮಿಕರು ಹಾಡಿರುವ ಈ ಹಾಡು ಈಗ ವೈರಲ್ ಆಗಿದೆ.

ಎರಡು ದಿನದಲ್ಲೇ ಹಿಮಾಚಲ ಪ್ರದೇಶದ ಮೂಲೆ ಮೂಲೆಯನ್ನು ಹಾಡು ತಲುಪಿದ್ದು, ಹಾಡುಗಾರನಿಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ಹಾಡಿನಲ್ಲಿ ಹಾಡುಗಾರ ತನ್ನ ನೋವು, ದುಃಖವನ್ನು ಹೇಳಿಕೊಂಡಿದ್ದಾನೆ. ದೃಷ್ಟಿಹೀನ ಶೋಭಾರಾಮ್ ಈ ಹಾಡನ್ನು ಹಾಡಿದ್ದು, ಇದನ್ನು ಯಾರು ಬರೆದಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮುಖ್ಯಮಂತ್ರಿ ಠಾಕೂರ್ ಬಾಲ್ಯದಿಂದ ಸಿಎಂ ಪಟ್ಟಕ್ಕೇರುವವರೆಗೆ ಹಾಗೂ ಅವ್ರ ಪತ್ನಿ ಸಾಧನಾ ಬೆಂಬಲದ ಬಗ್ಗೆ ಶ್ಲಾಘಿಸಲಾಗಿದೆ. ರಾಜಸ್ತಾನದಲ್ಲಿ ಮದುವೆಗಾಗಿ ಸಂಘರ್ಷಕ್ಕಿಳಿದ ಸಾಧನಾ ಹಾಗೂ ಪರ್ವತ ಕ್ಷೇತ್ರದ ಜನರ ಸಂಘರ್ಷವನ್ನು ಹಾಡಿನಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...