alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಸಾಮಾನ್ಯರಂತೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಐಎಎಸ್ ಅಧಿಕಾರಿ

ತಿರುವನಂತಪುರಂ: ಭೀಕರ ಮಳೆ, ಜಲಪ್ರಳಯಕ್ಕೆ ತುತ್ತಾಗಿ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸ್ವಯಂ ಸೇವಕರಂತೆ ಕೆಲಸ ಮಾಡಿ, ಸಂತ್ರಸ್ತರ ನೆರವು ಕಾರ್ಯದಲ್ಲಿ ಭಾಗಿಯಾಗಿದ್ದ ಘಟನೆ ಈಗ ಬೆಳಕಿಗೆ ಬಂದಿದೆ.

ಪ್ರಸ್ತುತ ದಾದ್ರಾ ಮತ್ತು ನಗರ್ ಹವೇಲಿ ಜಿಲ್ಲಾಧಿಕಾರಿಯಾಗಿರುವ ಕಣ್ಣನ್ ಗೋಪಿನಾಥನ್ ಎಂಬ ಐಎಎಸ್ ಅಧಿಕಾರಿ ಪ್ರವಾಹಪೀಡಿತ ಕೇರಳ ಜನತೆ ಸಹಾಯಕ್ಕಾಗಿ ಸ್ವತಃ ತಾವೇ ಮುಂದೆ ನಿಂತು ಸ್ವಯಂ ಸೇವಕರಂತೆ ಕೆಲಸ ಮಾಡಿದ್ದಾರೆ.

ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಆ.26 ರಂದು ಸರ್ಕಾರದ ವತಿಯಿಂದ 1 ಕೋಟಿ ರೂ. ನೆರವಿನ ಚೆಕ್ ನೀಡಲು ಕೇರಳಕ್ಕೆ ಆಗಮಿಸಿದ ಗೋಪಿನಾಥನ್, ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ, ವಾಪಸ್ ಹೋಗುವಾಗ ಜಲಪ್ರಳಯಕ್ಕೆ ಸಿಲುಕಿ ತತ್ತರಿಸಿರುವ ಸಂತ್ರಸ್ತರ ಸಂಕಷ್ಟವನ್ನು ಕಂಡು ಮರುಗಿದ್ದಾರೆ.

ತಕ್ಷಣ ಕೆಲಸಕ್ಕೆ ರಜೆ ಹಾಕಿದ ಗೋಪಿನಾಥನ್, ತಿರುವನಂತಪುರಂ ನಿಂದ ಪ್ರವಾಹ ಪೀಡಿತ ಚೆಂಗನ್ನೂರಿಗೆ ಬಂದಿದ್ದಾರೆ. ಅಲ್ಲಿನ ಜನರಿಗೆ ನೆರವಾಗಿದ್ದಾರೆ. ಪುನರ್ವಸತಿ ಕೇಂದ್ರಗಳಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡಿದ್ದಾರೆ. ತಾವು ಯಾರೆಂದು ಪ್ರಶ್ನಿಸಿದ ಜನರಿಗೆಲ್ಲ ಗೋಪಿನಾಥನ್ ಸರ್ಕಾರೇತರ ಸಂಸ್ಥೆಯೊಂದರ ಸ್ವಯಂಸೇವಕ ಎಂದು ತಿಳಿಸಿದ್ದಾರೆ.

ಗೋಪಿನಾಥನ್ ವಿಷಯ ಗೊತ್ತಾಗಿದ್ದು, ಎರ್ನಾಕುಲಂ ಜಿಲ್ಲಾಧಿಕಾರಿ ಮೊಹಮ್ಮದ್ ಸಫ್ರುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದಾಗ. ಗೋಪಿನಾಥನ್ ಓರ್ವ ಐಎಎಸ್ ಅಧಿಕಾರಿ ಎಂದು ತಿಳಿದು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಗೋಪಿನಾಥನ್ ಹೇಳುವುದೇನೆಂದರೆ ನನ್ನನ್ನು ಹೀರೋನಂತೆ ಬಿಂಬಿಸುವ ಅಗತ್ಯವಿಲ್ಲ. ಸಾಕಷ್ಟು ಜನರು ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಅವರು ನಿಜವಾದ ಹೀರೋಗಳು. ನಾನೇನು ಅಂಥ ದೊಡ್ಡ ಕಾರ್ಯಮಾಡಿಲ್ಲ. ಓರ್ವ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದೆ ಎಂದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...