alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಲ್ಲೇ ಅತಿ ಉದ್ದದ ಮೀಸೆ ಹೊಂದಿದ ವ್ಯಕ್ತಿ ಈತ

ಜೈಪುರ್: ದಾಖಲೆಗಾಗಿ ಕೆಲವರು ಏನೇನೋ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ವಿಶ್ವದಲ್ಲಿಯೇ ಅತಿ ಉದ್ದದ ಮೀಸೆ ಹೊಂದಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.

ಜೈಪುರದ ರಾಮ್ ಸಿಂಗ್ ಬರೋಬ್ಬರಿ 18 ಅಡಿ ಉದ್ದ ಮೀಸೆ ಬೆಳೆಸಿದ್ದಾರೆ. 1970 ರಿಂದಲೂ ಅವರು ಮೀಸೆಯನ್ನು ಬೆಳೆಸಿದ್ದು, ಒಂದು ಸಲವೂ ಮೀಸೆಗೆ ಕತ್ತರಿ ಹಾಕಿಲ್ಲ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮೀಸೆ ಬಿಟ್ಟಿರುವ ರಾಮ್ ಸಿಂಗ್, ಜನ ನನ್ನ ಮೀಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ನಾನು ಖ್ಯಾತಿ ಮತ್ತು ಗೌರವ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

18 ಅಡಿ ಉದ್ದದ ಮೀಸೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾದರೂ ಅವರೆಂದು ಹಿಂಜರಿದಿಲ್ಲ. ವಾರಕ್ಕೊಮ್ಮೆ ಗಡ್ಡವನ್ನು ಶೇವ್ ಮಾಡಿ, ಮೀಸೆಯನ್ನು ಕಾಪಾಡಿಕೊಂಡಿದ್ದಾರೆ. ಅಲ್ಲದೇ ಮೀಸೆಗೆ ವಾರಕ್ಕೊಮ್ಮೆ  ಆಲಿವ್, ತೆಂಗಿನ ಎಣ್ಣೆ ಹಚ್ಚಿ ಆರೈಕೆ ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...