alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವನ್ನು ರಕ್ಷಿಸಿದ ಯೋಧನ ವಿಡಿಯೋ ಫುಲ್ ವೈರಲ್

ಕೇರಳದಲ್ಲಿ ಮಳೆ ತನ್ನ ರುದ್ರನರ್ತನವನ್ನು ಮುಂದುವರೆಸಿದೆ. ಮಳೆಯ ಆರ್ಭಟಕ್ಕೆ ದೇವರ ನಾಡು ಸ್ಥಬ್ಧ. ಈಗಾಗಲೇ 37 ಜನರನ್ನು ಬಲಿ ಪಡೆದಿರುವ ಮಳೆ, ಹಲವರ ಜೀವನದ ಜೊತೆ ಚೆಲ್ಲಾಟವಾಡಿದೆ. ಇನ್ನು ರಕ್ಷಣಾ ಕಾರ್ಯ ಸಹ ಭರದಿಂದ ಸಾಗುತ್ತಿದೆ. ಈ ಮಧ್ಯ ತನ್ನ ಜೀವದ ಹಂಗನ್ನೇ ತೊರೆದು ಪುಟ್ಟ ಜೀವ ಕಾಪಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಯೋಧ ಹೀರೋ ಆಗಿದ್ದಾರೆ.

ಕೇರಳದಲ್ಲಿ ಜಲಾಶಯಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ಮಳೆಯ ಅಟ್ಟಹಾಸಕ್ಕೆ ಹಲವು ಸೇತುವೆಗಳು ಮುಳುಗಡೆಯಾಗಿವೆ. ಕೇರಳದ ಇಡುಕ್ಕಿ ಜಿಲ್ಲೆಯ ಚಿರುತೋಣಿ ಜಲಾಶಯದಿಂದ ಐದು ಗೇಟ್ ಗಳ ಮೂಲಕ ಅಪಾರ ಪ್ರಮಾಣದಲ್ಲಿ ನೀರನ್ನು ಬಿಡಲಾಗಿದೆ. ನೀರಿನ ರಭಸಕ್ಕೆ ಇನ್ನೇನು ಸೇತುವೆ ಮುಳಗೋದಿತ್ತು. ಆಗ ಎನ್.ಡಿ.ಆರ್.ಎಫ್. ಯೋಧ ಇನ್ನೊಂದು ಬದಿಯಲ್ಲಿದ್ದ ಮಗುವನ್ನು ರಕ್ಷಿಸಲು ಮುಂದಾಗಿದ್ದಾರೆ.

ಸೇತುವೆ ಮುಳುಗಡೆ ಹಂತದಲ್ಲಿರುವುದನ್ನು ಗಮನಿಸಿದ ಕುಟುಂಬ ಒಂದು ಸೇತುವೆಯ ಮತ್ತೊಂದು ಬದಿಯಲ್ಲಿ ರಕ್ಷಣೆಗೆ ಕಾದು ಕುಳಿತಿತ್ತು. ಆಗಲೇ ಎನ್.ಡಿ.ಆರ್.ಎಫ್. ಯೋಧ ಕನ್ಹಯ್ಯ ಕುಮಾರ್ ತಮ್ಮ ಜೀವದ ಹಂಗನ್ನು ಬಿಟ್ಟು, ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಮಗುವನ್ನು ತನ್ನ ಹೆಗಲ ಮೇಲೆ ಹೊತ್ತು ಬಂದಿದ್ದಾರೆ. ಈ ಯೋಧ ಮಗುವನ್ನು ರಕ್ಷಣೆ ಮಾಡುವ ದೃಶ್ಯ ರೆಕಾರ್ಡ್ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗ್ತಾ ಇದೆ.

ಎನ್‌ಡಿಆರ್‌ಎಫ್ ನ ಒಟ್ಟು 14 ತಂಡಗಳ 404 ಸಿಬ್ಬಂದಿ ಕೇರಳ ಇಡುಕ್ಕಿ, ವಯನಾಡ್, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...