alex Certify
ಕನ್ನಡ ದುನಿಯಾ       Mobile App
       

Kannada Duniya

ಅಜಾತಶತ್ರುವಿನ ಅಂತಿಮ ದರ್ಶನ ಪಡೆಯಲು 500 ಕಿ.ಮೀ. ಪ್ರಯಾಣಿಸಿದ ಅಭಿಮಾನಿ

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಹು ಅಂಗಾಂಗ ವೈಫಲ್ಯದಿಂದ ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಭಾರತ ಕಂಡ ಶ್ರೇಷ್ಠ ನಾಯಕನನ್ನು ಕೊನೆಯ ಬಾರಿ ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ದೂರದ ಊರಿನಿಂದ ಅಭಿಮಾನಿಗಳು ಸಹ ದೆಹಲಿಯತ್ತ ಮುಖ ಮಾಡಿದ್ರು.

ವಾಜಪೇಯಿಯವರ ನಿವಾಸ 6-ಎ ಕೃಷ್ಣಾ ಮೆನನ್ ರಸ್ತೆಯಲ್ಲಿನ ಬಂಗ್ಲೆಯತ್ತ ಕಾರ್ಯಕರ್ತರು ದೌಡಾಯಿಸಿದ್ರು. ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು, ಸರತಿ ಸಾಲಿನಲ್ಲಿ ನಿಂತು ಸಾಗಿದ್ರು. ದೂರದ ಊರಿನಿಂದ ಬಂದ ಸಾರ್ವಜನಿಕರಿಗೂ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಪೊಲೀಸ್, ಸೇನೆ, ಸೇರಿದಂತೆ ಹಲವು ರಕ್ಷಣಾ ಸಿಬ್ಬಂದಿಗಳು ಬಿಗುವಿನ ಭದ್ರತೆ ಒದಗಿಸಿದ್ದರು.

ಬಳಿಕ ವಾಜಪೇಯಿಯವರ ಪಾರ್ಥಿವ ಶರೀರ, ಬಿ.ಜೆ.ಪಿ ಕಛೇರಿಗೆ ತೆಗದುಕೊಂಡು ಹೋಗಲಾಯಿತು. ಬಳಿಕ ನಿಗದಿಪಡೆಸಲಾಗಿದ್ದ ಅಂತ್ಯ ಸಂಸ್ಕಾರ ಸ್ಥಳ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಪಂಚಭೂತಗಳಲ್ಲಿ ಲೀನರಾದ್ರು.

ನೆಚ್ಚಿನ ನಾಯಕನ ಪಾರ್ಥಿವ ಶರೀರದ ದರ್ಶನ ಪಡೆಯಲು ಹಲವು ಜನ ಆಗಮಿಸಿದ್ದರು. ಅದ್ರಲ್ಲಿ ಒಬ್ಬ ಅಭಿಮಾನಿ 500 ಕಿಲೋ ಮೀಟರ್ ಪ್ರಯಾಣಿಸಿ ಬಂದಿದ್ದ. ಉತ್ತರಾಖಂಡ ರಾಜ್ಯದ ಉತ್ತರಕಾಶಿಯಿಂದ ಬಂದ ಯೋಗೇಶ್ವರ್ ಕುಮಾರ್ ಅಟಲ್ ಜಿ ಜೊತೆಗಿನ ಒಡನಾಟವನ್ನು ನೆನೆದು ಭಾವುಕರಾದ್ರು. 1984 ಹಾಗೂ 1986 ರಲ್ಲಿ ವಾಜಪೇಯಿ ಅವರು ತಮ್ಮ ಗ್ರಾಮಕ್ಕೆ ಬಂದಿದ್ದರು, ಧೀಮಂತ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಬಂದಿರೋದಾಗಿ ತಿಳಿಸಿದ್ರು. ಅಲ್ಲದೆ ಕೈಯಲ್ಲಿ ಗಂಗಾ ಜಲವನ್ನು ಹೊತ್ತು ತಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...