alex Certify
ಕನ್ನಡ ದುನಿಯಾ       Mobile App
       

Kannada Duniya

ಅಸ್ಥಿಪಂಜರದ ಜೊತೆ 6 ತಿಂಗಳಿದ್ದವನ ಸಾವು

dejpg2015 ರ ಜೂನ್ ನಲ್ಲಿ ಕೋಲ್ಕತ್ತಾದ ಇಂಜಿನಿಯರ್ ಒಬ್ಬ ತನ್ನ ಸಹೋದರಿಯ ಅಸ್ಥಿಪಂಜರದೊಂದಿಗೆ 6 ತಿಂಗಳಿನಿಂದ ವಾಸವಾಗಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿತ್ತು. 46 ವರ್ಷದ ಪಾರ್ಥ ಡೇ ಎಂಬಾತನ ತಂದೆ ಅರಬಿಂದೋ ಡೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವೇಳೆ ಪರಿಶೀಲನೆಗೆ ಹೋಗಿದ್ದ ಪೊಲೀಸರು, ಮನೆಯಲ್ಲಿ ಮಾನವ ಅಸ್ಥಿಪಂಜರವಲ್ಲದೆ ಎರಡು ನಾಯಿಗಳ ಅಸ್ಥಿಪಂಜರ ಕಂಡು ಬೆಚ್ಚಿ ಬಿದ್ದಿದ್ದರು.

ಈ ಸಂಬಂಧ ಪಾರ್ಥ ಡೇಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಸಂಗೀತ ಶಿಕ್ಷಕಿಯಾಗಿದ್ದ ಆತನ ಸಹೋದರಿ, ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನಡೆಸದೆ ಮನೆಯಲ್ಲಿಯೇ ಇಟ್ಟುಕೊಂಡಿದ್ದು ತಿಳಿದುಬಂದಿತ್ತು.

ಬಳಿಕ ಪಾರ್ಥ ಡೇ ವಿರುದ್ದ ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿದ ಹಾಗೂ ಮನೆಯಲ್ಲಿ ಶವವಿದ್ದರೂ ಪೊಲೀಸರಿಗೆ ಮಾಹಿತಿ ನೀಡದ ಪ್ರಕರಣ ದಾಖಲಿಸಿ ಆತನನ್ನು ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾದ ನಂತರ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಪಾರ್ಥ ಡೇ, ಮೃತದೇಹ ಇಂದು ಕಂಡು ಬಂದಿದೆ. ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...