alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸ್ಸೆ ಗೌರವ…!

ಏಷ್ಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ಪ್ರತಿಷ್ಟಿತ ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾರತೀಯರು ಭಾಜನರಾಗಿದ್ದಾರೆ. 2018ನೇ ಸಾಲಿನಲ್ಲಿ ಒಟ್ಟು ಅರು ಮಂದಿ ಮ್ಯಾಗ್ಸೆಸ್ಸೆ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತದ ಡಾ. ಭರತ್ ವಟ್ವಾನಿ ಮತ್ತು ಸೋನಮ್ ವಾಂಗ್ಚುಕ್ ಅವರಿಗೆ ಕೂಡ ಅಂತಾರಾಷ್ಟ್ರೀಯ ಪುರಸ್ಕಾರ ಲಭ್ಯವಾಗಿದೆ.

ಭಾರತದಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಮತ್ತು ಅನಾಥ ಮಕ್ಕಳ ರಕ್ಷಣಾ ಕಾರ್ಯಗಳಲ್ಲಿ ಡಾ. ಭರತ್ ವಟ್ವಾನಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಬೀದಿ ಪಾಲಾದ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಮತ್ತು ರಕ್ಷಣೆ ಒದಗಿಸುತ್ತಿರುವ ಸಾಮಾಜಿಕ ಕಾಳಜಿಯನ್ನ ಮ್ಯಾಗ್ಸೆಸ್ಸೆ ಸಮಿತಿ ಗುರುತಿಸಿದೆ. ಅನಾಥ ಮಕ್ಕಳನ್ನ ತಮ್ಮ ಕ್ಲಿನಿಕ್ಗೆ ಕರೆತಂದು ಉಪಚರಿಸುವ ಕಾರ್ಯಕ್ಕೆ ಮ್ಯಾಗ್ಸೆಸ್ಸೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಅದೇ ರೀತಿ ಸೋನಮ್ ವಾಂಗ್ಚುಕ್ ದುರ್ಬಲರ ಶಕ್ತಿ ಎಂದೇ ಹೆಸರುವಾಸಿಯಾಗಿದ್ದಾರೆ. 1988ರಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಸೋನಮ್ ವಾಂಗ್ಚುಕ್ ಲಾಭದಾಯಕ ಹುದ್ದೆಯತ್ತ ಮುಖ ಮಾಡದೆ ಮಕ್ಕಳ ಶಿಕ್ಷಣದ ಹಕ್ಕುಗಳಿಗಾಗಿ ಸೇವೆ ಸಲ್ದಿಸುತ್ತಿದ್ದಾರೆ. ಲಡಾಖ್ ಸಮೀಪ ಸ್ಟೂಡೆಂಟ್ ಎಜುಕೇಷನ್ ಅಂಡ್ ಕಲ್ಚರಲ್ ಮೂಮೆಂಟ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಅಮೀರ್ ಖಾನ್ ಅಭಿನಯದ 3 ಈಡಿಯಟ್ಸ್ ಚಿತ್ರಕ್ಕೆ ಮೂಲ ಪ್ರೇರಣೆಯಾಗಿದ್ದೇ ವಾಂಗ್ಚುಕ್. ಆಗಸ್ಟ್ 31ರಂದು ಫಿಲಿಫೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...