alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಬಾಯಲ್ಲಿ ಪಟಾಕಿ ಸಿಡಿಸಿದವನ ವಿರುದ್ಧ ಕೊಲೆ ಯತ್ನದ ಕೇಸ್

ದೀಪಾವಳಿ ಆಚರಣೆ ಸಂಭ್ರಮದಲ್ಲಿ ಮೂರು ವರ್ಷದ ಬಾಲಕಿಯ ಬಾಯಲ್ಲಿ ‌ಪಟಾಕಿ ಹೊಡೆದಿದ್ದ ವ್ಯಕ್ತಿ ವಿರುದ್ಧ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೀರತ್ ಜಿಲ್ಲೆಯ ಸರ್ದಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಲ್ಲಿ ಮೂರು ವರ್ಷದ ಆಯುಷಿ ಎಂಬ ಬಾಲಕಿ‌ಯ ಬಾಯಲ್ಲಿ ಹರ್ಪಾಲ್ ಎನ್ನುವ ವ್ಯಕ್ತಿ ಪಟಾಕಿ ಇಟ್ಟು ಹೊಡೆದಿದ್ದರಿಂದ, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಆರೋಪಿಸಿ ಬಾಲಕಿಯ ತಂದೆ‌ ದೂರು ನೀಡಿದ್ದರು. ಈ‌ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ ಪ್ರಾಥಮಿಕ ತನಿಖೆಯಲ್ಲಿ ಹರ್ಪಾಲ್ ಬಾಲಕಿಯ ಮನೆ ಸಮೀಪ ಪಟಾಕಿ ಹೊಡೆಯುತ್ತಿದ್ದು, ಈ‌‌ ವೇಳೆ ಬಾಲಕಿಯೇ ಬಂದು ಅರ್ಧ ಬೆಂಕಿ‌ ಹತ್ತಿದ್ದ ಪಟಾಕಿಯನ್ನು ಬಾಯಲ್ಲಿಟ್ಟುಕೊಂಡು ಊದಲು ಪ್ರಯತ್ನಿಸಿದ್ದಾಳೆ. ಈ ವೇಳೆ ಪಟಾಕಿ ಸಿಡಿದಿದೆ ಎಂದು ತಿಳಿದುಬಂದಿದೆ.

ಆದರೆ ‌ದೂರಿನಲ್ಲಿ‌ ಹರ್ಪಾಲ್, ಬಾಲಕಿ ಮನೆಯೊಳಗೆ ಬಂದು, ಮಗುವಿಗೆ ಚಾಕಲೇಟ್ ಎಂದು ಪಟಾಕಿಯನ್ನು ಬಾಯಲ್ಲಿ ಇಟ್ಟು ಕಿಡಿ ಹೊತ್ತಿಸಿದ್ದಾನೆ ಎಂದು ತಿಳಿಸಲಾಗಿದೆ. ಸದ್ಯ ಬಾಲಕಿ‌ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...