alex Certify
ಕನ್ನಡ ದುನಿಯಾ       Mobile App
       

Kannada Duniya

ಧೋತಿ ಉಟ್ಟು ಬಂದವರಿಗೆ ಇಲ್ಲಿ ನೋ ಎಂಟ್ರಿ

dhoti

ಕೋಲ್ಕತ್ತಾದಲ್ಲಿ ವ್ಯಕ್ತಿಯೊಬ್ಬನಿಗೆ ಆತ ಧರಿಸಿದ್ದ ಉಡುಪಿನಿಂದಾಗಿ ಮಾಲ್ ನೊಳಕ್ಕೆ ಎಂಟ್ರಿ ಸಿಕ್ಕಿಲ್ಲ. ಅಷ್ಟಕ್ಕೂ ಆತ ಒಳ ಉಡುಪಿನಲ್ಲೋ ಅಥವಾ ಇನ್ಯಾವುದೇ ಅಶ್ಲೀಲ ಬಟ್ಟೆ ಧರಿಸಿ ಬಂದಿರಲಿಲ್ಲ. ಭಾರತದ ಸಾಂಪ್ರದಾಯಿಕ ಧಿರಿಸಾದ ಧೋತಿಯನ್ನು ಉಟ್ಟಿದ್ದ.

ಈ ಸಮಯದಲ್ಲಿ ಆತನ ಜೊತೆಗೆ ಗೆಳತಿ ದೆಬಲೀನಾ ಸೇನ್ ಕೂಡ ಇದ್ಲು. ದೆಬಲೀನಾ ಕೋಲ್ಕತ್ತಾದ ಪ್ರಸಿದ್ಧ ನಟಿ. ಆಕೆ ಈ ಘಟನೆ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಕೋಲ್ಕತ್ತಾದ ಕ್ವೆಸ್ಟ್ ಮಾಲ್ ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಧೋತಿ ಮತ್ತು ಲುಂಗಿ ಉಟ್ಟು ಬಂದವರಿಗೆ ಪ್ರವೇಶ ನೀಡುವುದಿಲ್ಲ ಅಂತಾ ಭದ್ರತಾ ಸಿಬ್ಬಂದಿ ಹೇಳಿದ್ದಾರಂತೆ.

ಯುವಕನನ್ನು ತಡೆದ ಭದ್ರತಾ ಸಿಬ್ಬಂದಿ ವಾಕಿಟಾಕಿ ಮೂಲಕ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ನಂತರ ಮಾಲ್ ನೊಳಗೆ ಪ್ರವೇಶಿಸಲು ಅವಕಾಶವಿಲ್ಲ ಅಂತಾ ಹೇಳಿದ್ದಾರೆ. ಆತ ಇಂಗ್ಲಿಷ್ ನಲ್ಲಿ ಮಾತನಾಡ್ತಿದ್ದ ಅನ್ನೋ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ ಅಂತಾ ಈಗ ಸಬೂಬು ಹೇಳುತ್ತಿದ್ದಾರೆ. ಇದು ನಟಿಯನ್ನು ಕೆರಳಿಸಿದ್ದು, ಭಾರತದ ಸಂಪ್ರದಾಯಕ್ಕೆ ಮಾಡಿರುವ ಅವಮಾನ ಅಂತಾ ಆಕ್ಷೇಪಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...