alex Certify
ಕನ್ನಡ ದುನಿಯಾ       Mobile App
       

Kannada Duniya

ಆತುರದಲ್ಲಿ ರೈಲು ಏರಲು ಮುಂದಾದವನಿಗೆ ಏನಾಯ್ತು ಗೊತ್ತಾ…?

ಚೆನ್ನೈನ ಎಗ್ಮೋರ್ ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸುತ್ತಿತ್ತು. ಇನ್ನೂ ರೈಲು ಬಂದು ನಿಂತಿಲ್ಲ, ಆಗಲೇ ಪ್ರಯಾಣಿಕನೊಬ್ಬ ಅವಸರವಸರವಾಗಿ ಏರಲು ಯತ್ನಿಸಿದ. ಆತನ ಕಾಲು ಜಾರಿತು, ರೈಲು ಮತ್ತು ಪ್ಲಾಟ್‌ ಫಾರಂನ ಮಧ್ಯೆ ಕಾಲು ಸಿಲುಕಿ ಹಾಕಿಕೊಂಡಿತು.

ಅದೃಷ್ಟವಶಾತ್ ಅಲ್ಲೇ ಪಕ್ಕದಲ್ಲಿ ನಿಂತಿದ್ದ ರೈಲ್ವೆ ರಕ್ಷಣಾ ಪಡೆಯ ಒಬ್ಬ ಸಿಬ್ಬಂದಿ ಧಾವಿಸಿ ತಕ್ಷಣವೇ ಆ ವ್ಯಕ್ತಿಯನ್ನು ಮೇಲಕ್ಕೆಳೆದರು. ಏನೂ ಅಪಾಯವಿಲ್ಲದೆ ಆ ಪ್ರಯಾಣಿಕ ಪಾರಾದ.

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿತ್ತು. ಆರ್‌ಪಿಎಫ್ ಸಿಬ್ಬಂದಿಯ ಸಮಯಪ್ರಜ್ಞೆಯನ್ನು ತೋರಿಸುವ 21 ಸೆಕೆಂಡುಗಳ ಈ ವಿಡಿಯೋ ರೈಲ್ವೆ ನಿಲ್ದಾಣದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಆನ್‌ ಲೈನ್‌ ನಲ್ಲಿ ಹರಿದಾಡುತ್ತಿದೆ. ಆರ್‌ಪಿಎಫ್ ಸಿಬ್ಬಂದಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫೆಬ್ರವರಿಯಲ್ಲಿ ಮುಂಬೈನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಪೇದೆಯೊಬ್ಬರ ಸಮಯಪ್ರಜ್ಞೆಯಿಂದ ಏಳು ವರ್ಷದ ಬಾಲಕನೊಬ್ಬ ರೈಲಿನಡಿಗೆ ಸಿಲುಕಿ ಹಾಕಿಕೊಳ್ಳುವುದರಿಂದ ಬಚಾವಾಗಿದ್ದ. ಪಶ್ಚಿಮ ರೈಲ್ವೆ ಆ ಪೇದೆಗೆ ಬಹುಮಾನವನ್ನೂ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...