alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯನ್ನು ಥಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಗ್ರಾಮಸ್ಥರು

ಕೇರಳದ ಪಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಎಂಬ ಗ್ರಾಮದಲ್ಲಿ ಕಳ್ಳತನ ಮಾಡ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನನ್ನು ಅಮಾನವೀಯವಾಗಿ ಥಳಿಸಿ ಜನರೇ ಹತ್ಯೆ ಮಾಡಿದ್ದಾರೆ. 27 ವರ್ಷದ ಆ ಯುವಕ ಮಾನಸಿಕ ಅಸ್ವಸ್ಥನಾಗಿದ್ದ.

ಕಾಡಿನಲ್ಲಿ ವಾಸಿಸ್ತಾ ಇದ್ದ, ಹೊಟ್ಟೆಪಾಡಿಗಾಗಿ ಆಗಾಗ ಸ್ಥಳೀಯ ಅಂಗಡಿಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡ್ತಿದ್ದ. ನಿನ್ನೆ ಅವನನ್ನು ಹಿಡಿದು ಕಟ್ಟಿ ಹಾಕಿದ ಗ್ರಾಮಸ್ಥರು, ಗಂಟೆಗಟ್ಟಲೆ ಥಳಿಸಿದ್ದಾರೆ. ಅವನನ್ನು ಮನಬಂದಂತೆ ಹಿಂಸಿಸಿದ್ದಾರೆ. ಈ ವೇಳೆ ಕೆಲವರು ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

ಮಧ್ಯಾಹ್ನದ ವೇಳೆಗೆ ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ರು. ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ವಾಂತಿ ಮಾಡಿಕೊಂಡು ಆತ ಕುಸಿದು ಬಿದ್ದಿದ್ದ. ಸಂಜೆ 5 ಗಂಟೆ ವೇಳೆಗೆ ಸಾವನ್ನಪ್ಪಿದ್ದಾನೆ. ಕಳೆದ ಕೆಲ ವಾರಗಳಲ್ಲಿ ಕೇರಳದಲ್ಲಿ ಇಂತಹ 3 ಘಟನೆಗಳು ನಡೆದಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...