alex Certify
ಕನ್ನಡ ದುನಿಯಾ       Mobile App
       

Kannada Duniya

ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದ ಪಾಪಿ ಪುತ್ರ

ಮಹಾರಾಷ್ಟ್ರದ ವಾಶಿಂನಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದಿದ್ದಾನೆ.

ಪಾಪಿ ಪುತ್ರನ ಈ ಘೋರ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆತನಿಗೆ ಛೀಮಾರಿ ಹಾಕುತ್ತಿದ್ದಾರಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮತ್ತೊಬ್ಬನೊಂದಿಗೆ ಭೂ ವಿವಾದ ಹೊಂದಿದ್ದ ಈ ವ್ಯಕ್ತಿ, ನ್ಯಾಯಾಲಯದಲ್ಲಿ ಪರಾಭವಗೊಂಡಿದ್ದು, ಕೇಸ್ ಗೆದ್ದವನು ಉಳುಮೆ ಮಾಡಲೆಂದು ಟ್ರಾಕ್ಟರ್ ತೆಗೆದುಕೊಂಡು ಬಂದ ವೇಳೆ ಈ ಘಟನೆ ನಡೆದಿದೆ.

ಆತ ಉಳುಮೆ ಮಾಡದಂತೆ ತಡೆಯುವ ಸಲುವಾಗಿ ತನ್ನ ವೃದ್ಧ ತಾಯಿಯನ್ನೇ ಗುರಾಣಿಯನ್ನಾಗಿ ಬಳಸಿಕೊಂಡ ಪುತ್ರ, ಟ್ರಾಕ್ಟರ್ ಚಕ್ರದ ಮುಂದೆ ಆಕೆಯನ್ನು ಎಸೆದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪಾಪಿ ಪುತ್ರನ ಬಂಧನಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...