alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಗರ್ಲ್ ಫ್ರೆಂಡ್ ಜತೆ ಸೆಲ್ಫಿ; ಕೊಲೆ ಮಾಡಿ ಎಸ್ಕೇಪ್ ..!

Selfie k-Vector

ಸದಾ ಕೂಲ್ ವಾತಾವರಣ ಹೊಂದಿರುವ ಡೆಹ್ರಾಡೂನ್ ಕಣಿವೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ತನ್ನ ಗೆಳತಿಯ ಜೊತೆಗೆ ಸೆಲ್ಫಿ ತೆಗೆದುಕೊಂಡ ದುರುಳನೊಬ್ಬ ಆಕೆಯನ್ನು ಕೊಲೆ ಮಾಡಿದ್ದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಪೋಸ್ಟ್ ಮಾಡಿದ್ದಾನೆ.

30 ವರ್ಷದ ಗುರುಪ್ರೀತ್ ಕೌರ್ ಎಂಬ ಮಹಿಳೆ ಹಾಗೂ ಆಶೀಶ್ ಕುಮಾರ್ ಎಂಬ ಯುವಕ ನೆರೆಹೊರೆಯವರಾಗಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಕಾರಣಾಂತರದಿಂದ ಗುರುಪ್ರೀತ್ ಕೌರ್ ಬೇರೆ ಕಡೆ ಮನೆ ಮಾಡಿದ್ದು, ಇಬ್ಬರೂ ದೂರವಾಗುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಆಕೆಗೆ ಬೇರೆಯವರೊಂದಿಗೆ ಆಫೇರ್ ಕೂಡ ಇದೆ ಎಂಬುದು ಆಶೀಶ್ ಗೆ ಗೊತ್ತಾಗಿದೆ. ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ ಆತ ಬೈಕ್ ನಲ್ಲಿ ಊರಿನಿಂದ ಹೊರಗೆ ಟೀ ಎಸ್ಟೇಟ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಂಡ ನಂತರ ಕುತ್ತಿಗೆ ಹಿಸುಕಿ ಸಾಯಿಸಲು ಮುಂದಾಗಿದ್ದಾನೆ. ಗುರುಪ್ರೀತ್ ಕೌರ್ ಜೋರಾಗಿ ಕೂಗಿದ್ದರಿಂದ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ಓಡಿ ಬಂದಿದ್ದಾರೆ. ಅಷ್ಟರಲ್ಲೇ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಗೆ ಇರಿದು ಪರಾರಿಯಾಗಿದ್ದಾನೆ. ಬಳಿಕ ಕೊಲೆ ಮಾಡುವ ಮೊದಲು ತೆಗೆದಿದ್ದ ಸೆಲ್ಫಿ ಪೋಸ್ಟ್ ಮಾಡಿ, ನಾನು ಇಂದು ತೀರ್ಮಾನವೊಂದನ್ನು ಕೈಗೊಂಡು ಅದನ್ನು ಮಾಡಿ ಮುಗಿಸಿದ್ದೇನೆ ಎಂದು ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...