alex Certify
ಕನ್ನಡ ದುನಿಯಾ       Mobile App
       

Kannada Duniya

ಕರಡಿಯೊಂದಿಗಿನ ಸೆಲ್ಫಿ ಕ್ರೇಜ್ ಗೆ ಬಲಿಯಾಯ್ತು ಜೀವ

ಗಾಯಗೊಂಡಿದ್ದ ಕರಡಿಯ ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಜೀವವನ್ನೇ ಕಳೆದುಕೊಂಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ.

ಪ್ರಭು ಭಾತ್ರಾ ಎಂಬವ ಜೊತೆಗಾರರೊಂದಿಗೆ ಎಸ್ ಯು ವಿ ಕಾರ್ ನಲ್ಲಿ ಪಾಪಹಂಡಿ ಎಂಬಲ್ಲಿಗೆ ಹೋಗುತ್ತಿದ್ದ. ದಾರಿ ಮಧ್ಯೆ ನಿಸರ್ಗದ ಕರೆಗೆ ಓಗೊಟ್ಟು ಗಾಡಿ ನಿಲ್ಲಿಸಿ ತೆರಳಿದ್ದ. ಆದರೆ ಕಾಡಿನ ಮಧ್ಯವಾದ್ದರಿಂದ ಅಲ್ಲಿಗೆ ಕರಡಿಯೊಂದು ಬಂದಿತ್ತು.

ಪ್ರಭು, ಗಾಯಗೊಂಡಿದ್ದ ಕರಡಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಆದರೆ ಅದೇನಾಯ್ತೋ ಗೊತ್ತಿಲ್ಲ, ಕರಡಿ ಪ್ರಭುವನ್ನು ಕಚ್ಚಿ ಸಾಯಿಸಿದೆ. ಕಾರಿನಲ್ಲಿದ್ದವರು ಇದನ್ನು ತಪ್ಪಿಸುವ ಬದಲು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಬಳಿಕ ಅಲ್ಲಿಂದ 10 ಕಿ.ಮೀ. ದೂರದಲ್ಲಿರುವ ಅರಣ್ಯಾಧಿಕಾರಿಗಳ ಕಚೇರಿಗೆ ಸುದ್ದಿ ಮುಟ್ಟಿಸಲಾಗಿದ್ದು, ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...