alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿದವಳೊಂದಿಗೆ ಬದುಕಲು ಬೈಕ್ ಕದ್ದ, ಆದ್ರೆ ಆಕೆ ಮಾಡಿದ್ದೇನು?

ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನೋ ಮಾತೇ ಇದೆ. 22ರ ಯುವಕ ರಮೇಶ್ ಬಾಳಲ್ಲಿ ನಡೆದಿದ್ದು ಕೂಡ ಇದೇ. ರಾಜಸ್ತಾನದ ಉದಯ್ಪುರ ಮೂಲದ ರಮೇಶ್ ಒಂದು ವರ್ಷದ ಹಿಂದೆ ಮಹಿಳೆಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದ. ನಂತರ ಅವಳ ಜೊತೆ ಓಡಿ ಹೋಗಿದ್ದ.

ಇದ್ರಿಂದ ಬೇಸರಗೊಂಡ ಯುವತಿಯ ಮನೆಯವರು ಪಂಚಾಯ್ತಿ ಸೇರಿಸಿದ್ದರು. ಊರ ಮುಖಂಡರೆಲ್ಲ ಸೇರಿ ಚರ್ಚಿಸಿ ಯುವತಿಯನ್ನು ಓಡಿಸಿಕೊಂಡು ಹೋದ ತಪ್ಪಿಗೆ ರಮೇಶ್ ಗೆ 40,000 ರೂಪಾಯಿ ದಂಡ ಹಾಕಿದ್ರು. ಅಷ್ಟು ಹಣ ಕೊಟ್ಟರೆ ಆ ಯುವತಿ ಜೊತೆ ಬದುಕಲು ಅವಕಾಶ ಕೊಡೋದಾಗಿ ಅವಳ ಕುಟುಂಬದವರು ಹೇಳಿದ್ರು.

ರಮೇಶ್ ಬಳಿ ಅಷ್ಟು ಹಣ ಇರಲಿಲ್ಲ. ಹೇಗಾದ್ರೂ ಮಾಡಿ 40,000 ರೂಪಾಯಿ ಕೊಟ್ಟು ಅವಳ ಜೊತೆ ಬದುಕಬೇಕು ಅನ್ನೋ ಆಸೆಯಿಂದ ಬೈಕ್ ಕದಿಯಲು ಶುರು ಮಾಡಿದ್ದ. ಹಣವನ್ನು ಕೂಡ ಕೂಡಿಟ್ಟ. ಆದ್ರೆ ಅಷ್ಟರಲ್ಲಿ ಆ ಯುವತಿ ಬೇರೊಬ್ಬನ ಜೊತೆಗೆ ಪರಾರಿಯಾಗಿದ್ಲು.

ಅಷ್ಟಕ್ಕೇ ರಮೇಶ್ ನ ಸಂಕಷ್ಟ ಮುಗಿಯಲಿಲ್ಲ. ಬೈಕ್ ಕದ್ದ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಳಿಯಿದ್ದ 12 ಮೋಟಾರ್ ಸೈಕಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಮೇಶ್ ಸುಮಾರು 50 ಬೈಕ್ ಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...