alex Certify
ಕನ್ನಡ ದುನಿಯಾ       Mobile App
       

Kannada Duniya

ಈತ ಒಂದೇ ಬ್ರಾಂಡ್ ನ ಸ್ಕೂಟರ್ ಕದ್ದ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ

thief arrestedಮುಂಬೈನಲ್ಲಿ ಸ್ಕೂಟರ್ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಈತನನ್ನು ನೋಡಿದ ಸಾರ್ವಜನಿಕರು ಮಾಹಿತಿ ನೀಡಿದ ವೇಳೆ ಈ ಬಂಧನವಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಈವರೆಗೂ ಈತ ಮುಂಬೈನ ವಿವಿಧ ಭಾಗಗಳಲ್ಲಿ 17 ಸ್ಕೂಟರ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

35 ವರ್ಷದ ರಾಜು ನಾಥುಲಾಲ್ ಶರ್ಮಾ ಬಂಧಿತ ಸ್ಕೂಟರ್ ಕಳ್ಳನಾಗಿದ್ದು, ಈತ ಕಳವು ಮಾಡಿರುವ ಸ್ಕೂಟರ್ ಗಳೆಲ್ಲವೂ ಹೋಂಡಾ ಆಕ್ಟೀವಾಗಳು. ಇವುಗಳನ್ನೇ ಕಳವು ಮಾಡಲು ಕಾರಣವೇನೆಂದು ಪೊಲೀಸರು ಪ್ರಶ್ನಿಸಿದಾಗ ಆತ ನೀಡಿದ ಉತ್ತರಕ್ಕೆ ಪೊಲೀಸರು ನಕ್ಕು ಬಿಟ್ಟಿದ್ದಾರೆ. ಯಾಕೆಂದರೆ ರಾಜು ನಾಥುಲಾಲ್ ಶರ್ಮಾನಿಗೆ ದ್ವಿಚಕ್ರ ವಾಹನಗಳ ಪೈಕಿ ಹೋಂಡಾ ಆಕ್ಟೀವಾ ಬಿಟ್ಟರೆ ಬೇರೆ ವಾಹನ ಓಡಿಸಲು ಬರುವುದಿಲ್ಲವಂತೆ. ಹಾಗಾಗಿ ಇವುಗಳನ್ನೇ ಆತ ಕಳವು ಮಾಡಿದ್ದಾನೆ.

ಅಷ್ಟೇ ಅಲ್ಲ, ತನ್ನ ಗ್ರಾಹಕರಿಂದ 2 ಸಾವಿರದಿಂದ 5 ಸಾವಿರದವರೆಗೆ ಮುಂಗಡ ಹಣ ಪಡೆಯುತ್ತಿದ್ದ ಈತ ಹೋಂಡಾ ಆಕ್ಟೀವಾ ಹುಡುಕಿಕೊಂಡು ಹೋಗುತ್ತಿದ್ದ. ಮುಂಬೈನ ಧಾರಾವಿ, ಮಾಹಿಮ್, ವಕೋಲಾ, ಬೋಹಿವಾಡಾ, ಆನ್ ಟಾಪ್ ಹಿಲ್, ಎಲ್.ಟಿ. ಮಾರ್ಗ್ ಹಾಗೂ ಸಾಹೂ ನಗರ್ ಸೇರಿದಂತೆ ಹಲವು ಪ್ರದೇಶಗಳಿಂದ ಒಟ್ಟು 17 ಹೋಂಡಾ ಆಕ್ಟೀವಾಗಳನ್ನು ಕದ್ದಿದ್ದು, ಅವುಗಳನ್ನೀಗ ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...