alex Certify
ಕನ್ನಡ ದುನಿಯಾ       Mobile App
       

Kannada Duniya

250 ರೂ.ಗಾಗಿ ಆತ್ಮೀಯ ಗೆಳೆಯನನ್ನೇ ಕೊಂದ…!

ಕೇವಲ 250 ರೂ. ಬಾಕಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗೆಳೆಯನನ್ನೇ ಇರಿದು ಕೊಂದ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್‌ನ ಶಹೀಬಾಬಾದ್‌ ನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಸಂಜಯ್ ಎಂದು ಗುರುತಿಸಲಾಗಿದ್ದು, ಆತ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ಗೆಳೆಯ ಪ್ರದೀಪ್‌ನೊಂದಿಗೆ ಗುರುವಾರ ಸಂಜೆ ಮದ್ಯ ಸೇವಿಸುತ್ತಿದ್ದ. ಅಮಲೇರುತ್ತಿದ್ದಂತೆ ಗೆಳೆಯರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತು.

ನನ್ನಿಂದ ಸಾಲ ತೆಗೆದುಕೊಂಡಿದ್ದ 250 ರೂ. ವಾಪಸ್ ನೀಡಿಲ್ಲ ಯಾಕೆ ಎಂದು ಈ ವೇಳೆ ಪ್ರದೀಪ್ ಪ್ರಶ್ನಿಸಿದ್ದಾನೆ. ಅಷ್ಟಕ್ಕೇ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಇದು ತಾರಕಕ್ಕೇರಿ ಸಂಜಯ್‌ ನ ಎದೆಗೆ ಪ್ರದೀಪ್ ಮೂರು ಬಾರಿ ಕತ್ತರಿಯಿಂದ ಇರಿದಿದ್ದಾನೆ.

ಅಕ್ಕಪಕ್ಕ ಇದ್ದವರು ತಕ್ಷಣವೇ ಸಂಜಯನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಆತ ಬದುಕುಳಿಯಲಿಲ್ಲ. ಗೆಳಯನನ್ನು ಕೊಂದ ಆರೋಪಿ ಪ್ರದೀಪ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...