alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರೆದುರೇ ಮಾಜಿ ಪತ್ನಿಯ ಮೊಬೈಲ್ ಎಗರಿಸಿದ ಭೂಪ

ಚೆನ್ನೈನ ಮರೀನಾ ಬೀಚ್ ಬಳಿ ವ್ಯಕ್ತಿಯೋರ್ವ ತನ್ನ ಮಾಜಿ ಪತ್ನಿಯ ಮೊಬೈಲ್‌ ಕದ್ದಿದ್ದಾನೆ. ಯಾಕೆ ಗೊತ್ತೇ? ಅಸೂಯೆಯಿಂದ! ಸುರೇಶ್‌ ಸಾರ್ವಜನಿಕರ ಸಮ್ಮುಖದಲ್ಲೇ ತನ್ನ ಮಾಜಿ ಪತ್ನಿ ಲತಾಳ ಮೊಬೈಲ್‌ ಕದ್ದು ಓಡಿದ ವ್ಯಕ್ತಿ.

ಲತಾ ಹಾಗೂ ಸುರೇಶ್‌ ನಡುವೆ 2 ವರ್ಷಗಳ ಹಿಂದೆ ವಿಚ್ಛೇದನವಾಗಿತ್ತು. ಪ್ರತಿಮೆ ಬಳಿ ಫೋನ್‌ ನಲ್ಲಿ ಲತಾ ಮಾತನಾಡುತ್ತಿದ್ದಾಗ ಸುರೇಶ್‌ ಫೋನ್‌ ಎಗರಿಸಿದ್ದಾನೆ.

ಅಲ್ಲೇ ಹತ್ತಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ರಾಜದುರೈ ಎಂಬಾತ ಸುರೇಶ್‌ ಹಿಂದೆ ಓಡಿ, ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣವನ್ನು ರಾಜಿ ಮಾತುಕತೆಯಲ್ಲಿ ಮುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...