alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ವೈರಲ್ ಆಗಿದೆ ಪ್ರವಾಸಕ್ಕೆ ಹೊರಟ ದಂಪತಿ ಫೋಟೋ

ಊರಿಗೆ ಹೋಗೋದು ಅಂದ್ರೆ ದಿನಗಟ್ಟಲೆ ಪ್ಯಾಕ್ ಮಾಡೋದೇ ಆಗುತ್ತದೆ. ಇನ್ನು ವಯಸ್ಸಾದ ತಂದೆ–ತಾಯಿ ಬೇರೆ ಊರುಗಳತ್ತ ಪ್ರಯಾಣ ಮಾಡ್ತಾರೆ ಅಂದ್ರೆ, ಹೆಚ್ಚಿನ ಕಾಳಜಿ ವಹಿಸಿ ಪ್ಯಾಕಿಂಗ್ ಮಾಡಿರುತ್ತಾರೆ.

ವಿಷ್ಣು ಎಂಬವರು ತಮ್ಮ ಪೋಷಕರು ಊರಿಗೆ ಹೊರಡಲು ಸಿದ್ಧರಾಗಿರುವ ಫೋಟೋ ತೆಗೆದು ಟ್ವಿಟರ್ ನಲ್ಲಿ ಹಾಕಿದ್ದಾರೆ. ಈ ಫೋಟೋಗೆ ನೆಟ್ಟಿಗರು ಸಖತ್ ರೆಸ್ಪಾನ್ಸ್ ನೀಡಿದ್ದಾರೆ.

ಫೋಟೋದಲ್ಲಿ ವಿಷ್ಣು ಅವರ ಪೋಷಕರು ಡೈನಿಂಗ್ ಟೇಬಲ್ ಮೇಲೆ ಕುಳಿತು, ಯಾವಾಗ ಮನೆಯನ್ನು ಬಿಡಬೇಕು ಎಂಬುದನ್ನು ಯೋಚಿಸುವಂತಿದೆ. ಅವರ ಪಕ್ಕದಲ್ಲಿ ಬ್ಯಾಗ್ ಎಲ್ಲ ರೆಡಿ. ಇನ್ನೇನು ಫ್ಲೈಟ್ ಗೆ ಏರೋದೊಂದೆ ಬಾಕಿ ಉಳಿದಿದೆ ಎಂದು ಬಿಂಬಿಸುವಂತಿದೆ.

ವಿಷ್ಣು ಈ ಫೋಟೋ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ತಾಣದಲ್ಲಿ ಸದ್ದು ಮಾಡ್ತಾ ಇದೆ. ಕೆಲವು ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡ್ರೆ, ಇನ್ನು ಕೆಲವರು ಕಾಲು ಎಳೆದಿದ್ದಾರೆ. ಈ ಫೋಟೋ 10 ಸಾವಿರ ಬಾರಿ ರೀ-ಟ್ವಿಟ್ ಆಗಿದ್ದು, 35 ಸಾವಿರ ಲೈಕ್ ಸಿಕ್ಕಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...