alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಕಾರ್ಡ್ ಮಾಹಿತಿ ನೀಡಿದ ಮರುಕ್ಷಣದಲ್ಲೇ ಹಣ ಮಂಗಮಾಯ

atm transactionಅಪರಿಚಿತರು ಕರೆ ಮಾಡಿ ಎಟಿಎಂ ಕಾರ್ಡ್ ವಿವರ ಕೇಳಿದ ಪಕ್ಷದಲ್ಲಿ ಯಾವುದೇ ಮಾಹಿತಿ ನೀಡಬಾರದೆಂದು ಬ್ಯಾಂಕ್ ಗಳು ಆಗಾಗ ಎಚ್ಚರಿಕೆ ನೀಡುತ್ತಿದ್ದರೂ ಕೆಲವರು ಮಾತ್ರ ವಂಚಕರ ಜಾಲಕ್ಕೆ ಬೀಳುತ್ತಲೇ ಇರುತ್ತಾರೆ. ಅಂತಹುದೇ ಮತ್ತೊಂದು ಪ್ರಕರಣದ ವಿವರ ಇಲ್ಲಿದೆ.

ಮುಂಬೈನ ಉಮೇಶ್ ವಘೇಲಾ ಎಂಬವರಿಗೆ ಕರೆ ಮಾಡಿದ ಅಪರಿಚಿತನೊಬ್ಬ, ತನ್ನನ್ನು ತಾನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ. ನಿಮ್ಮ ಕಾರ್ಡ್ ಬ್ಲಾಕ್ ಆಗಿದೆ ಎಂದು ಹೇಳಿದ ಆತ, ಪಾಸ್ ವರ್ಡ್ ಸಹಿತ ಕಾರ್ಡ್ ನ ವಿವರ ಪಡೆದುಕೊಂಡಿದ್ದಾನೆ.

ಅಷ್ಟೇ ಅಲ್ಲ, ನೀವು ಬೇರೆ ಬ್ಯಾಂಕಿನ ಕಾರ್ಡ್ ಹೊಂದಿದ್ದರೆ ಅದರ ಮಾಹಿತಿಯನ್ನೂ ನೀಡಿ ಎಂದು ಕೇಳಿದ್ದಾನೆ. ಹಿಂದುಮುಂದು ಯೋಚಿಸದ ಉಮೇಶ್ ವಘೇಲಾ, ಇಂಡಸ್ ಇಂಡ್ ಬ್ಯಾಂಕ್ ಎಟಿಎಂ ಕಾರ್ಡ್ ಮಾಹಿತಿ ನೀಡಿದ್ದಾರೆ. ಅವರು ವಿವರ ಕೊಟ್ಟ ಮರು ಕ್ಷಣದಲ್ಲೇ ಅವರ ಮೊಬೈಲ್ ಗೆ ಬಂದ ಸಂದೇಶ ನೋಡಿ ಉಮೇಶ್ ವಘೇಲಾ ಶಾಕ್ ಆಗಿದ್ದಾರೆ. ಎರಡೂ ಖಾತೆಗಳಿಂದ ಒಟ್ಟು 50 ಸಾವಿರ ರೂ. ಗಳನ್ನು ಲಪಟಾಯಿಸಲಾಗಿದೆ. ಇದೀಗ ಈ ಕುರಿತು ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...