alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಸೋಮಾರಿ ಅಂತಾ ವಿಚ್ಛೇದನ ಕೇಳ್ತಿದ್ದಾನೆ ಪತಿರಾಯ

ವಿಚ್ಛೇದನ ಅನ್ನೋದು ಈಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ದಂಪತಿ ಬೇರೆಯಾಗ್ತಾರೆ. ಮುಂಬೈನಲ್ಲಿ ಪತ್ನಿ ಸೋಮಾರಿ ಅನ್ನೋ ಕಾರಣಕ್ಕೆ ಅವಳಿಂದ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ.

ಆಕೆ ಬೆಳಗ್ಗೆ ತಡವಾಗಿ ಏಳ್ತಾಳೆ, ರುಚಿ ರುಚಿಯಾಗಿ ಅಡುಗೆ ಮಾಡೋದಿಲ್ಲ ಅನ್ನೋದು ಅವನ ಆರೋಪ. ಆದ್ರೆ ಇಂಥಾ ಕ್ಲುಲ್ಲಕ ಕಾರಣಕ್ಕೆ ವಿಚ್ಛೇದನ ಕೊಡಲು ಸಾಧ್ಯವಿಲ್ಲ ಅಂತಾ ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಮೊದಲು ಆತ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.

ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇದರಲ್ಲಿ ಕ್ರೂರವಾದದ್ದು, ಸಹಿಸಿಕೊಳ್ಳಲು ಅಸಾಧ್ಯವಾದಂಥದ್ದೇನೂ ಇಲ್ಲ ಹಾಗಾಗಿ ಡೈವೋರ್ಸ್ ನೀಡಲು ಸಾಧ್ಯವಿಲ್ಲ ಎಂದಿತ್ತು. ಅಷ್ಟೇ ಅಲ್ಲ ಆಕೆ ಕೆಲಸಕ್ಕೂ ಹೋಗ್ತಾಳೆ, ಮನೆಯ ಜವಾಬ್ಧಾರಿಯನ್ನೂ ನಿಭಾಯಿಸ್ತಾಳೆ.

ಮನೆಗೆ ಬೇಕಾದ ದಿನಸಿ ಸಾಮಾನುಗಳನ್ನು ತಂದು ಇಡೀ ಕುಟುಂಬದವರಿಗೆ ಅಡುಗೆ ಮಾಡಿ ಹಾಕುವವರೆಗೆ ಎಲ್ಲಾ ಜವಾಬ್ಧಾರಿ ಅವಳ ಮೇಲಿದೆ. ಅಂಥದ್ರಲ್ಲಿ ಪತ್ನಿ ಸೋಮಾರಿ ಎನ್ನುತ್ತಿರುವ ಪತಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಅದನ್ನು ಪ್ರಶ್ನಿಸಿ ಆತ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...