alex Certify
ಕನ್ನಡ ದುನಿಯಾ       Mobile App
       

Kannada Duniya

ಕರೆಂಟ್ ಬಿಲ್ ನೋಡಿ ಕಂಗಾಲಾಗಿದ್ದಾನೆ ಜಾರ್ಖಂಡ್ ವ್ಯಕ್ತಿ

power

ಜೆಮ್ ಶೆಡ್ಪುರ ನಿವಾಸಿಯೊಬ್ಬ ಕರೆಂಟ್ ಬಿಲ್ ನೋಡಿ ಹೌಹಾರಿದ್ದಾನೆ. ಬಿ.ಆರ್. ಗುಹಾ ಎಂಬಾತನಿಗೆ ಜಾರ್ಖಂಡ್ ವಿದ್ಯುತ್ ಮಂಡಳಿಯಿಂದ 38 ಬಿಲಿಯನ್ ಮೊತ್ತದ ಬಿಲ್ ಬಂದಿದೆ. ಅಷ್ಟೇ ಅಲ್ಲ ಕರೆಂಟ್ ಬಿಲ್ ಕಟ್ಟಿಲ್ಲ ಅನ್ನೋ ಕಾರಣಕ್ಕೆ ಆತನ ಮನೆಯ ವಿದ್ಯುತ್ ಸಂಪರ್ಕವನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ಗುಹಾನದ್ದು ಮೂರು ಕೊಠಡಿಗಳ ಪುಟ್ಟ ಮನೆ. ಮೂರು ಫ್ಯಾನ್, ಮೂರು ಟ್ಯೂಬ್ ಲೈಟ್ ಮತ್ತು ಟಿವಿ ಉರಿಸ್ತಾರೆ. ಬರೀ ಇಷ್ಟಕ್ಕೆ 38 ಬಿಲಿಯನ್ ಬಿಲ್ ಬರಲು ಹೇಗೆ ಸಾಧ್ಯ ಅನ್ನೋದು ಅವನ ಪ್ರಶ್ನೆ. ಗುಹಾಗೆ ಬಿಪಿ ಸಮಸ್ಯೆಯಿದೆ, ಆತನ ಪತ್ನಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ.

ಭಾರೀ ಮೊತ್ತದ ಕರೆಂಟ್ ಬಿಲ್ ನೋಡಿ ಇಬ್ಬರೂ ಗಾಬರಿಯಾಗಿದ್ದಾರೆ, ಏನಾದ್ರೂ ಅನಾಹುತವಾದ್ರೆ ಏನು ಗತಿ ಅನ್ನೋದು ಪುತ್ರಿಯ ಅಳಲು. ನೆರೆಹೊರೆಯವರ ಸಹಾಯದಿಂದ ಈ ಬಗ್ಗೆ ದೂರು ದಾಖಲಿಸಲಾಗಿದೆ. ವಿದ್ಯುತ್ ಮಂಡಳಿ ಸಿಬ್ಬಂದಿಯ ಯಡವಟ್ಟಿನಿಂದ ಹೀಗಾಗಿರಬಹುದು ಅಂತಾ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...