alex Certify
ಕನ್ನಡ ದುನಿಯಾ       Mobile App
       

Kannada Duniya

ಕೆನಡಾಗೆ ತೆರಳಲು ಈತ ಮಾಡಿದ್ದ ಖತರ್ನಾಕ್ ಪ್ಲಾನ್

ಪ್ರಸಿದ್ಧ ವಜ್ರ ವ್ಯಾಪಾರಿ ಪುತ್ರ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿ, ಬಳಿಕ ಆಕೆಗೆ ಬ್ಲಾಕ್ ಮೇಲೆ ಮಾಡಿ ಹಣಕ್ಕೆ ಪೀಡಿಸಿ ಜೈಲು ಪಾಲಾದ ಘಟನೆ ಮುಂಬೈನಲ್ಲಿ ನಡೆದಿದೆ.

ದೌರ್ಜನ್ಯಕ್ಕೊಳಗಾದ 25 ವಯಸ್ಸಿನ ಮಹಿಳೆ ಮುಂಬೈನ ವಾಶಿ ಪ್ರದೇಶದವರಾಗಿದ್ದು, ಮೂರು ವ್ಯಕ್ತಿಗಳಿಂದ ಬೆದರಿಕೆಗೊಳಗಾದ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ದೂರಿನ ಪ್ರಕಾರ, ಪ್ರಸಿದ್ಧ ವಜ್ರ ವ್ಯಾಪಾರಿ ಹಿತೇಶ್ ಷಾ ಅವರ ಪುತ್ರ 24 ವರ್ಷದ ಧರಣ್ ಷಾ ಕಳೆದ ಎರಡು ವರ್ಷಗಳಿಂದ ಮದುವೆಯಾಗುವ ಭರವಸೆ ನೀಡಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆಂದು ಹೇಳಲಾಗಿದೆ. ನಂತರ ಚಿತ್ರೀಕರಣ ನಡೆಸಿ ಬ್ಲಾಕ್ಮೇಲ್ ಸಹ ಮಾಡಿದ್ದಾನೆ. ಜತೆಗೆ 4 ಲಕ್ಷ ರೂ. ಪಡೆದುಕೊಂಡಿದ್ದಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕೆನಡಾ ಪ್ರವಾಸಕ್ಕೆ ಹಣ ಕೊಡಬೇಕೆಂದು ಪೀಡಿಸಿದ್ದಾನೆ.

ಈ ವೇಳೆ ಆಕೆ ತಾನು ಅಷ್ಟು ಹಣ ಕೊಡಲು ಸಾಮರ್ಥ್ಯ ಹೊಂದಿಲ್ಲ ಎಂದು ಗೋಗರೆದಿದ್ದಾಳೆ. ಇಷ್ಟರ ನಡುವೆಯೂ ತನ್ನ ಸ್ನೇಹಿತರೊಡನೆ ದೈಹಿಕ ಸಂಪರ್ಕ ಹೊಂದು, ಅವರು ಕೆನಡಾ ಪ್ರವಾಸ ಪ್ರಾಯೋಜಿಸುತ್ತಾರೆ ಎಂದಿದ್ದಾನೆ.

ಅದಕ್ಕವಳು ಒಪ್ಪದಾಗ ಆರೋಪಿ ಬೆದರಿಕೆ ತಂತ್ರ ಪ್ರಯೋಗಿಸಿದ್ದಾನೆ. ತನಗೆ ಬೆದರಿಕೆ ಹಾಕಿದ ವ್ಯಕ್ತಿಗಳ ಹಿಂದೆ ತನ್ನನ್ನು ಅತ್ಯಾಚಾರ ಮಾಡಿದ ವ್ಯಕ್ತಿ ಇದ್ದಾನೆ ಎಂದೂ ಸಹ ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಭಾರತೀಯ ದಂಡ ಸಂಹಿತೆ 376, 503 ಮತ್ತು 420ರ ಅಡಿ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿತನ ಕುಟುಂಬದವರು ಆತನನ್ನು ಮುಗ್ಧ ಎಂದು ಹೇಳಿಕೊಳ್ಳುತ್ತಿರುವ ನಡುವೆಯೂ ಆಕೆಗೆ ಬೆದರಿಕೆ ಸಂದೇಶಗಳು ಬಂದಿವೆ. ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...