alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಪ್ಯಾಂಟ್ ಎಳೆದು ಜೈಲು ಸೇರಿದ ಯುವಕ

ಮುಂಬೈನ ಖಾಂಡೀವಲಿ ಪ್ರದೇಶದ ನ್ಯೂ ಲಿಂಕ್ ರಸ್ತೆಯಲ್ಲಿ ಹೋಗುತ್ತಿದ್ದ 40 ವರ್ಷದ ಮಹಿಳೆಯ ಪ್ಯಾಂಟ್ ಎಳೆದು, ಕಿರುಕುಳ ನೀಡಿದ ಆರೋಪದಡಿ 33 ವರ್ಷದ ಯುವಕ ಜೈಲು ಸೇರಿದ್ದಾನೆ.

ರಾಮ್ ರಾಜ್ ಪವಾರ್ ಎಂಬಾತ ಸ್ಕೂಟರ್ ನಲ್ಲಿ ಕುಳಿತುಕೊಂಡಿದ್ದ. ಈ ವೇಳೆ ಅದೇ ಬೀದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಪ್ಯಾಂಟ್ ಎಳೆದಿದ್ದಾನೆ. ರಸ್ತೆಯಲ್ಲಿ ಹೊರಟಾಗ ಅಚಾನಕ್ ಆಗಿ ನಡೆದ ಘಟನೆಯಿಂದ ಶಾಕ್ ಗೆ ಒಳಗಾದ ಮಹಿಳೆ, ಕೂಗಿಕೊಂಡಿದ್ದಾರೆ.

ಮಹಿಳೆ ಕೂಗಿಕೊಂಡದ್ದನ್ನು ಕಂಡ ಸಾರ್ವಜನಿಕರು ನೆರವಿಗೆ ಧಾವಿಸಿ ಬಂದ ವೇಳೆ ಯುವಕ ಸ್ಕೂಟರ್ ಹತ್ತಿ ಜಾಗ ಖಾಲಿ ಮಾಡಲು ಮುಂದಾಗಿದ್ದಾನೆ. ಆದ್ರೆ, ಅದಾಗಲೇ ಸೇರಿದ್ದ ಸಾರ್ವಜನಿಕರು, ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಯುವಕನನ್ನು ಕರೆದೊಯ್ದಿದ್ದಾರೆ. ಸದ್ಯ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆದಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...