alex Certify
ಕನ್ನಡ ದುನಿಯಾ       Mobile App
       

Kannada Duniya

ಸುಲಭವಾಗಿ ಯಾಮಾರಿದ್ದಾರೆ ಯುಪಿ ಪೊಲೀಸರು…!

ಎಂ.ಆರ್.ಟಿ. ರಿಜ್ವಿ ಎಂಬಾತ ತಾನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಖಾಸಗಿ ಸಹಾಯಕನೆಂದು ಸುಳ್ಳು ಹೇಳಿ ಹಿರಿಯ ಅಧಿಕಾರಿಗಳನ್ನೆಲ್ಲ ಯಾಮಾರಿಸಿದ್ದಾನೆ. ಮೀರತ್ ನ ಎಸ್ಎಸ್ಪಿ ಮಂಜಿಲ್ ಸೈನಿ ಆತನ ನಾಟಕಕಕ್ಕೆ ಪರದೆ ಎಳೆದಿದ್ದಾರೆ.

ತಾನು ಯೋಗಿ ಆದಿತ್ಯನಾಥ್ ಅವರ ಪಿಎ ಎಂದು ನಕಲಿ ದಾಖಲೆಗಳನ್ನು ರಿಜ್ವಿ ನೀಡಿದ್ದ. ಅದನ್ನು ನಂಬಿದ ಅಧಿಕಾರಿಗಳು ಆತನ ಭದ್ರತೆಗಾಗಿ ಬೆಂಗಾವಲು ಪಡೆಯನ್ನೇ ನೀಡಿದ್ದರು. ಭಾನುವಾರ ನೇರವಾಗಿ ಹಿರಿಯ ಪೊಲೀಸ್ ಅಧೀಕ್ಷಕರ ಮನೆಗೆ ಬಂದಿದ್ದ ರಿಜ್ವಿ, ನಿಮ್ಮೊಂದಿಗೆ ಪರ್ಸನಲ್ ಕೆಲಸವಿದೆ ಎಂದಿದ್ದ.

ಅನುಮಾನ ಬಂದ ಅಧೀಕ್ಷಕರು ಕೂಡಲೇ ಅವನನ್ನು ಮನೆಯಿಂದ ಹೊರಕ್ಕೆ ಕಳಿಸಿ ದಾಖಲೆಗಳನ್ನೆಲ್ಲ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಆ ಹೆಸರಿನ ಯಾವುದೇ ವ್ಯಕ್ತಿ ಸಿಎಂ ವೈಯಕ್ತಿಕ ಸಹಾಯಕ ಹುದ್ದೆಯಲ್ಲಿಲ್ಲ ಅಂತಾ ಸಿಎಂಓ ಕೂಡ ಮಾಹಿತಿ ನೀಡಿದೆ. ಇಡೀ ದಿನ ಸರ್ಕಾರಿ ವಾಹನದಲ್ಲಿ ಸುತ್ತಾಡಿದ ರಿಜ್ವಿ, ಪೊಲೀಸರು ತನ್ನ ಬಗ್ಗೆ ತನಿಖೆ ಮಾಡ್ತಿರೋದು ಗೊತ್ತಾಗ್ತಿದ್ದಂತೆ ಮೀರತ್ ನಿಂದ ಪರಾರಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...