alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದೇನು…?

ಅನೇಕ ಬಾರಿ‌ ಆನ್ ಲೈನ್ ನಲ್ಲಿ ಖರೀದಿ ಮಾಡುವಾಗ ಬಣ್ಣ ಬಣ್ಣದ ಆಫರ್ ಮೂಲಕ‌ ಮರುಳಾಗಿಸುವ ಕಂಪನಿಗಳು, ಕೊನೆಗೆ ಗ್ರಾಹಕರಿಗೆ ಮೋಸ ಮಾಡುವುದೇನು ಹೊಸ ವಿಷಯವಲ್ಲ. ಇದಕ್ಕೆ ನೂತನವಾಗಿ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ.

ಮಹಾರಾಷ್ಟದ ಔರಂಗಾಬಾದ್ ನಲ್ಲಿ ವ್ಯಕ್ತಿಯೊಬ್ಬ ಆನ್ ಲೈನ್ ಮಾರುಕಟ್ಟೆ ಸಂಸ್ಥೆಯಿಂದ ಮೋಸ ಹೋಗಿದ್ದು, ಇದೀಗ ಪೊಲೀಸರಿಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾನೆ.

9124 ರೂಪಾಯಿ‌ ಬೆಲೆಯ ಮೊಬೈಲ್ ನ್ನು ಕೆಲದಿನಗಳ‌ ಹಿಂದೆ ಔರಂಗಾಬಾದ್ ನ ಯುವಕ ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದಾನೆ.‌ ಭಾನುವಾರ ಈ ಆರ್ಡರ್ ಯುವಕನ ಕೈ ಸೇರಿದೆ. ಆದರೆ ಪ್ಯಾಕೇಜ್ ತಗೆದಾಗ, ಮೊಬೈಲ್ ಬದಲಿಗೆ ಇಟ್ಟಿಗೆ ಇರುವುದು ನೋಡಿ ಗಾಬರಿಯಾಗಿದ್ದಾನೆ.

ಈ‌ ಸಂಬಂಧ ಕೊರಿಯರ್ ಸರ್ವಿಸ್ ಗೆ ಕರೆ ಮಾಡಿದಾಗ, ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು‌ ಹೇಳಿದ್ದು, ಈ ಸಂಬಂಧ ಹರ್ಸೂಲ್ ಪೊಲೀಸ್ ಠಾಣೆಯಲ್ಲಿ ಇ- ಕಾರ್ಮಸ್ ಕಾಯಿದೆ ಅನ್ವಯ ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...