alex Certify
ಕನ್ನಡ ದುನಿಯಾ       Mobile App
       

Kannada Duniya

8 ಮಹಿಳೆಯರನ್ನು ಮದುವೆಯಾಗಿ ಈತ ಮಾಡಿದ್ದಾನೆ ಕೋಟಿ ಕೋಟಿ ಹಣ

ವೆಲ್ಲೋರ್ ನ ಬಿ.ಪುರುಷೋತ್ತಮನ್ ಟ್ರಕ್ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದ. ಆದ್ರೆ ಅದರಲ್ಲಿ ನಯಾಪೈಸೆ ಲಾಭ ಸಿಗದೇ ಮದುವೆ ಬ್ಯುಸಿನೆಸ್ ಗೆ ಇಳಿದ. 8 ವರ್ಷಗಳಲ್ಲಿ 8 ಮಹಿಳೆಯರನ್ನು ಮದುವೆಯಾಗಿರೋ ಪುರುಷೋತ್ತಮ್ ಬಳಿ ಈಗ 4.5 ಕೋಟಿ ರೂಪಾಯಿ ಆಸ್ತಿ ಇದೆ.

45 ವರ್ಷದ ಕಾಲೇಜು ಪ್ರಾಧ್ಯಾಪಕಿ ಇಂದಿರಾ ಕೂಡ ಪುರುಷೋತ್ತಮ್ ನಿಂದ ಮೋಸ ಹೋದವರಲ್ಲಿ ಒಬ್ಬರು. ಚೆನ್ನೈನಲ್ಲಿದ್ದ ಆಕೆಯ ಸ್ವಂತ ಮನೆಯನ್ನು ಮಾರಿ, ಕೊಯಂಬತ್ತೂರಿನಲ್ಲಿ ಸೆಟಲ್ ಆಗೋಣ ಅಂತಾ ಪತಿ ಪುರುಷೋತ್ತಮ್ ಹೇಳಿದ್ದ. ಮನೆ ಮಾರಿ ಬಂದ 1.5 ಕೋಟಿ ರೂಪಾಯಿ ತೆಗೆದುಕೊಂಡು ಎಸ್ಕೇಪ್ ಆಗಿಬಿಟ್ಟಿದ್ದ.

ಪತಿ, ಮನೆ , ಹಣ ಎಲ್ಲವನ್ನೂ ಕಳೆದುಕೊಂಡ ಇಂದಿರಾ ಪೊಲೀಸರಿಗೆ ದೂರು ನೀಡಿದ್ಲು. ಪೊಲೀಸ್ ತನಿಖೆಯಲ್ಲಿ ಪುರುಷೋತ್ತಮನ ಅಸಲಿಯತ್ತು ಬಯಲಾಗಿದೆ. ಇದೇ ರೀತಿ 8 ಮಹಿಳೆಯರನ್ನು ಮದುವೆಯಾಗಿ ಕೈಕೊಟ್ಟಿರೋ ಈ ಭೂಪ ಕೋಟಿ ಕೋಟಿ ಹಣವನ್ನೂ ಪೀಕಿದ್ದ.

ಕೊಯಂಬತ್ತೂರಿನ ಮ್ಯಾಟ್ರಿಮೊನಿಯೊಂದರ ಜೊತೆಗೆ ಪುರುಷೋತ್ತಮ ಡೀಲ್ ಮಾಡಿಕೊಂಡಿದ್ದ. ಅಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಇವನಿಂದ ಹಣ ಪಡೆದು, ಶ್ರೀಮಂತ ವಿಧವೆಯರು ಮತ್ತು ಮಹಿಳೆಯರ ಬಗ್ಗೆ ಮಾಹಿತಿ ನೀಡುತ್ತಿದ್ಲು. ಈತನ ವಿರುದ್ಧ ಒಟ್ಟು 18 ವಂಚನೆ ಪ್ರಕರಣಗಳು ದಾಖಲಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...