alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್.ಐ.ಸಿ. ಹಣ ಪಡೆಯಲು ಇಂಥ ಕೆಲಸ ಮಾಡಿದ ಪತಿ

ಹಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನ ಬೋಗಿಯಲ್ಲಿ ಮಹಿಳೆಯೊಬ್ಬಳ ಶವ ಸಿಕ್ಕಿತ್ತು. ಆರಂಭದಲ್ಲಿ ಸಾಮಾನ್ಯ ಸಾವು ಎಂದುಕೊಂಡಿದ್ದ ಪೊಲೀಸರು ತನಿಖೆ ನಂತ್ರ ಸತ್ಯ ಬಯಲಿಗೆಳೆದಿದ್ದಾರೆ. ಮಹಿಳೆ ಹತ್ಯೆ ಮಾಡಿದ್ದು ಪತಿ ಎಂಬುದು ಗೊತ್ತಾಗಿದೆ. ಕೊಲೆಗೆ ಕಾರಣವನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಎಲ್.ಐ.ಸಿ. ಪಾಲಿಸಿ ಹಣವನ್ನು ಪಡೆಯಲು ಪತಿ, ಪತ್ನಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಣದಲ್ಲಿ ಆತ ಇನ್ನೊಂದು ಮದುವೆಯಾಗುವ ಪ್ಲಾನ್ ಮಾಡಿದ್ದ. ಪತ್ನಿ ನಾಪತ್ತೆಯಾಗಿದ್ದಾಳೆಂದು ಆರೋಪಿ ದೂರು ನೀಡಿದ್ದನಂತೆ. ನಾಲ್ಕೈದು ದಿನಗಳ ನಂತ್ರ ಮಹಿಳೆ ಶವದ ಗುರುತು ಪತ್ತೆ ಮಾಡಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ನಂತ್ರ ಮೃತದೇಹವನ್ನು ಸಂಬಂಧಿಕರಿಗೆ ನೀಡಿದ್ದರು.

ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಅನುಮಾನ ಹೆಚ್ಚಿಸಿತ್ತು. ಕತ್ತು ಹಿಸುಕಿ ಮಹಿಳೆ ಕೊಲೆ ಮಾಡಲಾಗಿದೆ ಎಂಬ ವರದಿ ಆಧಾರಿಸಿ ವಿಚಾರಣೆ ಶುರುಮಾಡಿದ ಪೊಲೀಸರ ಕೈಗೆ ಪತಿ ಸಿಕ್ಕಿಬಿದ್ದಿದ್ದ.

ಆರೋಪಿಯನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...