alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಿನ ಪ್ರಿಯಕರನಿಂದಲೇ ನಡೆದಿದೆ ಘೋರ ಕೃತ್ಯ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದುವೆಯಾದ ಎರಡೇ ದಿನಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ. ವಧುವಿನ ಪ್ರಿಯಕರನೇ ಕೊಲೆ ಆರೋಪಿಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಲಖನ್ ಸಿಂಗ್ ಕೊಲೆಯಾದ ಯುವಕ. 2 ದಿನಗಳ ಹಿಂದೆ ಸಮುದಾಯದ ಸಂಪ್ರದಾಯದ ರೀತಿಯಲ್ಲಿ ಪ್ರಿಯಾಂಕಾ ಅವರನ್ನು ಲಖನ್ ಸಿಂಗ್ ಮದುವೆಯಾಗಿದ್ದಾರೆ. ಪ್ರಿಯಾಂಕಾ ಮನೆಯಲ್ಲಿ ನಡೆದ ಮದುವೆ ನಂತರದ ಸಮಾರಂಭದಲ್ಲಿ ಕುಟುಂಬದವರೊಂದಿಗೆ ಭಾಗವಹಿಸಿದ್ದ ಅವರು ನಂತರ ನಾಪತ್ತೆಯಾಗಿದ್ದಾರೆ.

ಪೊಲೀಸರು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಯಮುನಾ ನದಿಯ ಬಳಿ ಲಖನ್ ಸಿಂಗ್ ಬೈಕ್, ಅದರಿಂದ ಸ್ವಲ್ಪ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದಾಗ, ಪ್ರಿಯಾಂಕಾ ಪ್ರಿಯಕರನಾಗಿರುವ ಅಜಯ್ ಗೋಯೆಲ್ ಹತ್ಯೆ ಮಾಡಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಜಯ್ ಮದುವೆ ನಿಲ್ಲಿಸಲು ಪ್ರಯತ್ನ ನಡೆಸಿ, ಲಖನ್ ಮತ್ತು ಪ್ರಿಯಾಂಕಾರಿಗೆ ಕಿರುಕುಳ ನೀಡಿದ್ದ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...