alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ತಂದೆಯ ಆಧಾರ್ ವಿವರ ಹಿಂಪಡೆಯಲು ಸುಪ್ರೀಂ ಕೋರ್ಟ್ ಗೆ ಮೊರೆ

ಬೆಂಗಳೂರಿನ ಮಾನವ ಸಂಪನ್ಮೂಲ ಮ್ಯಾನೇಜರ್ ಒಬ್ಬರು UIDAI, ಆಧಾರ್ ಕಾರ್ಡ್ ಗಾಗಿ ತಮ್ಮ ತಂದೆಯಿಂದ ಪಡೆದ ಬಯೋಮೆಟ್ರಿಕ್ ಡೇಟಾವನ್ನು ವಾಪಸ್ ಕೊಡುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಸಂತೋಷ್ ಮಿನ್ ಬಿ ಅವರ ತಂದೆ ಮೃತಪಟ್ಟಿದ್ದಾರೆ. ಹಾಗಾಗಿ ಅವರ ಬಯೋಮೆಟ್ರಿಕ್ ಡೇಟಾದಿಂದ UIDAIಗೆ ಯಾವ ಪ್ರಯೋಜವೂ ಇಲ್ಲ. ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇರುವುದರಿಂದ ಸಂತೋಷ್ ವಾಪಸ್ ಕೊಡುವಂತೆ ಕೇಳಿದ್ದಾರೆ. ಸಂತೋಷ್ ಆಯುರ್ವೇದಿಕ್ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಸಂತೋಷ್ ಗೆ ವಾದ ಮಾಡಲು ಕೇವಲ 2 ನಿಮಿಷ ಕಾಲಾವಕಾಶ ನೀಡಿತ್ತು. ಪ್ರಾವಿಡೆಂಟ್ ಫಂಡ್ ಕಚೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಆಧಾರ್ ದೃಢೀಕರಣ ಹೆಸರಲ್ಲಿ ವೃದ್ಧರ ಮೇಲೆ ದೌರ್ಜನ್ಯ ನಡೆಯುತ್ತಿದೆ ಅಂತಾ ಸಂತೋಷ್ ತಂದೆ, ಪ್ರಧಾನಿ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದರಂತೆ.

ಆ ಪತ್ರ ಪೂರ್ಣಗೊಳ್ಳುವ ಮುನ್ನವೇ ಅವರು ಮೃತಪಟ್ಟಿದ್ದರು. ಅದನ್ನು ಸಹ ಸಂತೋಷ್ ಕೋರ್ಟ್ ಮುಂದೆ ಹಾಜರುಪಡಿಸಿದ್ರು. ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 20ಕ್ಕೆ ಮುಂದೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...