alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲಿಗೆ ತಾಳಿ ಕಟ್ಟಿದ 75ರ ವೃದ್ಧ.! ಕಾರಣವೇನು ಗೊತ್ತಾ?

ಹಿಂದೂ ಧರ್ಮದಲ್ಲಿ ಸಪ್ತಪದಿ ತುಳಿದು ಮದುವೆಯಾಗುವ ಪದ್ಧತಿ ತುಂಬಾ ಹಳೆಯದು. ವಧು-ವರರು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕೆಲವೊಂದು ಕಾರಣಕ್ಕೆ ಬೆಕ್ಕು, ನಾಯಿ, ಕಪ್ಪೆಗಳಿಗೆ ಮದುವೆ ಮಾಡಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮರದ ತುಂಡನ್ನು ಮದುವೆಯಾಗಿದ್ದಾನೆ.

ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಬಕರ್ಗಂಜ್ ಗ್ರಾಮದಲ್ಲಿ ಈ ಅನನ್ಯ ಮದುವೆ ನಡೆದಿದೆ. 75 ವರ್ಷದ ವೃದ್ಧ ಮರದ ತುಂಡನ್ನು ಮದುವೆಯಾಗಿದ್ದಾನೆ. ಮರದ ಕೋಲಿಗೆ ಮಹಿಳೆಯಂತೆ ಸೀರೆ ಉಡಿಸಿ, ಶೃಂಗಾರ ಮಾಡಲಾಗಿತ್ತು. ಮದುಮಗನಂತೆ ಸಿಂಗಾರಗೊಂಡಿದ್ದ ವೃದ್ಧ ದುರ್ಗಾ ಪ್ರಸಾದ್ ಗೆ ಕೋಲಿನ ಜೊತೆ ಸಂಪ್ರದಾಯದಂತೆ ಮದುವೆ ನಡೆಯಿತು.

ಬಕರ್ಗಂಜ್ ನಲ್ಲಿ ಅವಿವಾಹಿತರ ಅಂತ್ಯಸಂಸ್ಕಾರದ ವೇಳೆ ಮುಖಾಗ್ನಿ ಮಾಡುವಂತಿಲ್ಲ. ಕುಟುಂಬ ನಿರ್ವಹಣೆ ಹೊಣೆ ಹೊತ್ತಿದ್ದ ದುರ್ಗಾ ಪ್ರಸಾದ್ ಮದುವೆಯಾಗಿರಲಿಲ್ಲ. ದುರ್ಗಾ ಪ್ರಸಾದ್ ಸಾವಿನ ನಂತ್ರ ವಿಧಿ-ವಿಧಾನದ ಪ್ರಕಾರ ಅಂತ್ಯಸಂಸ್ಕಾರ ನಡೆಯುತ್ತಿರಲಿಲ್ಲ. ಹಾಗಾಗಿ ಮದುವೆಯಾಗುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರೆ. ಇದೇ ಕಾರಣಕ್ಕೆ ದುರ್ಗಾ ಪ್ರಸಾದ್ ಕೋಲಿನ ಜೊತೆ ಮದುವೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...