alex Certify
ಕನ್ನಡ ದುನಿಯಾ       Mobile App
       

Kannada Duniya

ರೇಪ್ ಕೇಸ್ ನಲ್ಲಿ ಹೊರಬಿತ್ತು ಆರೋಪಿಯ ಮದುವೆ ಪುರಾಣ

ಜಾರ್ಖಂಡದ ರಾಮಗಢದಲ್ಲಿ ಮದುವೆ ನಾಟಕವಾಡಿ ಅತ್ಯಾಚಾರವೆಸಗಿದ್ದ ಆರೋಪಿಯೊಬ್ಬ ಜೈಲು ಪಾಲಾಗಿದ್ದಾನೆ. ಮದುವೆಯಾಗುವದಾಗಿ ನಂಬಿಸಿ 2009ರಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದ ವ್ಯಕ್ತಿ ಬಣ್ಣ ಬಯಲಾಗಿದೆ. ಒಂದಲ್ಲ ಎರಡಲ್ಲ 5 ಮದುವೆಯಾಗಿದ್ದ ಆರೋಪಿಯನ್ನು ಆರನೇ ಹುಡುಗಿ ಬಯಲು ಮಾಡಿದ್ದಾಳೆ.

ರಾಂಚಿ ನಿವಾಸಿಯನ್ನು ಪ್ರೀತಿ ಬಲೆಗೆ ಬೀಳಿಸಿಕೊಂಡಿದ್ದ ಬ್ರಿಜೇಶ್ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗುತ್ತಿದ್ದ. ಮದುವೆಗೆ ಒತ್ತಾಯ ಮಾಡ್ತಿದ್ದಂತೆ ಯುವತಿಯನ್ನು ವೆಲ್ಲೂರಿಗೆ ಕರೆದುಕೊಂಡು ಬಂದಿದ್ದ. ಸಹೋದರಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ನೆಪ ಹೇಳಿದ್ದ. ಆದ್ರೆ ಅನಾರೋಗ್ಯದಿಂದ ಬಳಲುತ್ತಿದ್ದವಳು ಬ್ರಿಜೇಶ್ ಸಹೋದರಿಯಾಗಿರಲಿಲ್ಲ. ಆತನ ಪತ್ನಿಯಾಗಿದ್ದಳು.

ಆಕೆಯೇ ಬ್ರಿಜೇಶ್ ಇನ್ನೊಂದು ಸಂಬಂಧ ಹೊಂದಿದ್ದಾನೆಂಬ ಬಗ್ಗೆ ಪೀಡಿತೆಗೆ ಮಾಹಿತಿ ನೀಡಿದ್ದಳು. ಅಲ್ಲಿಗೆ ಹೋದಾಗ ಬ್ರಿಜೇಶ್ ಎರಡು ಮದುವೆಯಾಗಿರುವುದು ತಿಳಿಯಿತು. ವಿಚಾರಣೆ ನಡೆಸುತ್ತ ಹೋದಂತೆ ಬ್ರಿಜೇಶ್ ಬೇರೆ ಬೇರೆ ರಾಜ್ಯದಲ್ಲಿ ಒಟ್ಟು ಐದು ಮದುವೆಯಾಗಿದ್ದಾನೆಂಬ ಸಂಗತಿ ಹೊರಬಿತ್ತು. ಇದಾದ ನಂತ್ರ ಯುವತಿ ಬ್ರಿಜೇಶ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಳು. ವಿಚಾರಣೆ ನಂತ್ರ ಕೋರ್ಟ್ ಬ್ರಿಜೇಶ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 50 ಸಾವಿರ ರೂಪಾಯಿ ದಂಡ ನೀಡುವಂತೆ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...