alex Certify
ಕನ್ನಡ ದುನಿಯಾ       Mobile App
       

Kannada Duniya

ಪರ್ಸ್ ಕಳೆದುಕೊಂಡ ಯುವಕನಿಗೆ 11 ದಿನಗಳ ಬಳಿಕ ಸಿಕ್ಕ ಸಂದೇಶವೇನು?

ಗುರುಪ್ರೀತ್ ಸಿಂಗ್ ನಿಜಕ್ಕೂ ಅದೃಷ್ಟವಂತ. ಯಾಕಂದ್ರೆ ದೆಹಲಿ ಮೆಟ್ರೋದಲ್ಲಿ ಕಳೆದು ಹೋಗಿದ್ದ ಈತನ ವಾಲೆಟ್ 11 ದಿನಗಳ ಬಳಿಕ ಮರಳಿ ಸಿಕ್ಕಿದೆ. ಮಾರ್ಚ್ 15ರಂದು ಈ ಯುವಕ ಸೆಂಟ್ರಲ್ ಸೆಕ್ರೆಟರಿಯೇಟ್ ನಿಂದ ಮೆಟ್ರೋ ಮೂಲಕ ಲಾಜ್ಪತ್ ನಗರಕ್ಕೆ ಪ್ರಯಾಣಿಸಿದ್ದ.

ಲಾಜ್ಪತ್ ನಗರದಲ್ಲಿ ಮೆಟ್ರೋ ಇಳಿದ ಬಳಿಕ ವಾಲೆಟ್ ಜೇಬಿನಲ್ಲಿಲ್ಲ ಅನ್ನೋದು ಆತನ ಗಮನಕ್ಕೆ ಬಂದಿತ್ತು. ಕೂಡಲೇ ಈ ಬಗ್ಗೆ ಕಸ್ಟಮರ್ ಕೇರ್ ಗೆ ಮಾಹಿತಿ ನೀಡಿದ ಗುರುಪ್ರೀತ್, ರೈಲು ಕೊನೆಯ ನಿಲ್ದಾಣ ತಲುಪಿದ ಬಳಿಕ ಪರಿಶೀಲಿಸುವಂತೆ ಮನವಿ ಮಾಡಿಕೊಂಡ.

ಆದ್ರೆ ಆತನ ವಾಲೆಟ್ ಮೆಟ್ರೋದಲ್ಲಿ ಸಿಗಲಿಲ್ಲ. ನೊಯ್ಡಾದ ಸಿದ್ದಾರ್ಥ್ ಮೆಹ್ತಾ ಎಂಬುವವರಿಗೆ ಕಳೆದು ಹೋಗಿದ್ದ ಆ ಪರ್ಸ್ ಸಿಕ್ಕಿತ್ತು. ಅದರಲ್ಲಿದ್ದ ಹಣ, ದಾಖಲೆಗಳು ಎಲ್ಲವನ್ನೂ ಪೋಸ್ಟ್ ಮುಖಾಂತರ ಸಿದ್ದಾರ್ಥ್ ಗೆ ಕಳಿಸಿಕೊಟ್ಟಿದ್ದಾರೆ.

ಅಷ್ಟೇ ಅಲ್ಲ ಇನ್ಮೇಲೆ ಕೇರ್ಫುಲ್ ಆಗಿರುವಂತೆ ಮೆಸೇಜ್ ಬರೆದು, ಸ್ಮೈಲಿ ಜೊತೆಗೆ ವಾಲೆಟ್ ಕಳಿಸಿದ್ದಾರೆ. ಈ ಬಗ್ಗೆ ಗುರುಪ್ರೀತ್ ಫೇಸ್ಬುಕ್ ನಲ್ಲೂ ಪೋಸ್ಟ್ ಮಾಡಿದ್ದು, ಸಿದ್ದಾರ್ಥ್ ಗೆ ಧನ್ಯವಾದ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...