alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ದೆಹಲಿ ಪೊಲೀಸರ ಈ ಕಾರ್ಯ…!

ಸಿನಿಮಾಗಳಲ್ಲಿ ವಿಲನ್ ಗಳನ್ನು ಚಿತ್ರದ ಹೀರೋ ಬಗ್ಗು ಬಡಿದ ನಂತರವೇ ಪೊಲೀಸರು ಎಂಟ್ರಿ ಕೊಡುತ್ತಾರೆ. ನಿಜ ಜೀವನದಲ್ಲೂ ಕೆಲವು ಪೊಲೀಸರ ವರ್ತನೆ ಅದೇ ರೀತಿ ಇರುತ್ತದೆ. ಆದರೆ ದೆಹಲಿ ಪೊಲೀಸರು ಮಾಡಿರುವ ಈ ಕಾರ್ಯ ಮಾತ್ರ ಎಲ್ಲರಿಂದ ಮೆಚ್ಚುಗೆ ಪಡೆಯುವಂತೆ ಆಗಿದೆ.

ಇತ್ತೀಚೆಗೆ ನಿಶಾಂತ್ ಎಂಬುವರು ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿದ್ದ ವೃದ್ದ ಮಹಿಳೆಯೊಬ್ಬರನ್ನು ಕಂಡರು. ಆಕೆ ಬಳಿ ಹೋಗಿ ವಿಚಾರಿಸಿದಾಗ ಮನೆ ವಿಳಾಸ ಮರೆತಿರುವುದಾಗಿ ತಿಳಿಸಿದ್ದರು. ವೃದ್ದ ಮಹಿಳೆಗೆ ಸಹಾಯ ಮಾಡಲು ಮುಂದಾದ ನಿಶಾಂತ್, ವೃದ್ಧ ಮಹಿಳೆಯ ಪೋಟೊ ತೆಗೆದು ತಮ್ಮ ಸ್ನೇಹಿತ ತಾಜಿಂದರ್ ಬಗ್ಗಾ ಎಂಬುವವರಿಗೆ 12 ಗಂಟೆ 59 ನಿಮಿಷಕ್ಕೆ ಕಳಿಸಿದರು. ಇದಕ್ಕೆ ಮರು ನಿಮಿಷವೇ ಪ್ರತಿಕ್ರಿಯಿಸಿದ ಬಗ್ಗಾ ಪೋಲಿಸರಿಗೆ ಮಾಹಿತಿ ನೀಡಲು ಸೂಚಿಸಿದ್ದರು.

1 ಗಂಟೆ 3 ನಿಮಿಷಕ್ಕೆ ನಿಶಾಂತ್ ದೆಹಲಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರಿದ್ದ ಸ್ಥಳಕ್ಕೆ 1 ಗಂಟೆ 12 ನಿಮಿಷಕ್ಕೆ ಬಂದ ಪೋಲಿಸರು ವೃದ್ದ ಮಹಿಳೆಯನ್ನು ಕರೆದೊಯ್ದಿದ್ದಾರೆ. ತಮಗೆ ಕರೆ ಬಂದ ಕೇವಲ 9 ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ವೃದ್ಧ ಮಹಿಳೆಗೆ ನೆರವು ನೀಡಲು ಮುಂದಾದ ದೆಹಲಿ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...