alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿ ಭವನದ ಹಿಂದಿರುವ ಅರಣ್ಯದಲ್ಲಿ ಗುಪ್ತ ವಾಸ

man-living-in-alcove-on-prez-estate-for-40-yearsರಾಷ್ಟ್ರಪತಿ ಭವನದ ಹಿಂದಿರುವ ಕಾಡಿನಲ್ಲಿ ಕಳೆದ 40 ವರ್ಷಗಳಿಂದ ವ್ಯಕ್ತಿಯೊಬ್ಬ ವಾಸವಾಗಿದ್ದ ಎಂಬ ಸಂಗತಿ ರಕ್ಷಣಾ ಸಿಬ್ಬಂದಿಗೆ ಈಗ ತಿಳಿದಿದೆ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ರಾಷ್ಟ್ರಪತಿ ಭವನದ  ಹಿಂದಿರುವ ಕಾಡಿನಲ್ಲಿ ಭಯೋತ್ಪಾದಕರು ನುಗ್ಗಿದ್ದಾರೆಂಬ ಮಾಹಿತಿ ಮೇರೆಗೆ ರಕ್ಷಣಾ ಸಿಬ್ಬಂದಿ ಅರಣ್ಯ ಪ್ರವೇಶ ಮಾಡಿದ್ದಾರೆ. ಈ ವೇಳೆ ಕಾಡಿನಲ್ಲಿ 40 ವರ್ಷಗಳಿಂದ ವ್ಯಕ್ತಿಯೊಬ್ಬ ವಾಸವಾಗಿದ್ದ ಎಂಬ ಸಂಗತಿ ತಿಳಿದಿದೆ.

68 ವರ್ಷದ ಗಾಜಿ ನೂರಲ್ ಹಸನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈ ವೇಳೆ 40 ವರ್ಷಗಳಿಂದ ಈ ಕಾಡಿನಲ್ಲಿ ವಾಸವಾಗಿರುವುದನ್ನು ಗಾಜಿ ಒಪ್ಪಿಕೊಂಡಿದ್ದಾನೆ. ತುಘಲಕ್ ಕಾಲದ ಸ್ಮಾರಕದ ಕೆಳಗೆ ಕಳೆದ 40 ವರ್ಷಗಳಿಂದ ಈತ ವಾಸವಾಗಿದ್ದಾನೆ. 22 ವರ್ಷದ ಮಗ ಮೊಹಮ್ಮದ್ ನೂರ್ ಜೊತೆ ವಾಸವಾಗಿದ್ದಾನೆ. ಕಳೆದ 20 ವರ್ಷಗಳಿಂದ ಈತನ ಬಳಿ ವೋಟರ್ ಐಡಿ, ಪಾಸ್ಪೋರ್ಟ್ ಇದ್ದು, ವಿದ್ಯುತ್ ಸಂಪರ್ಕ ಕೂಡ ಪಡೆದಿದ್ದಾನೆ. ಎಲ್ಲ ದಾಖಲೆಯ ಮೇಲೆ ಸಮಾಧಿ ಹೆಸರಿದೆ.

ಮೊದಲು ಗೇಟ್ ದಾಟಿ ಒಳಗೆ ಹೋಗ್ತಾ ಇದ್ದೆ. ಈಗ ಗೇಟ್ ಬಾಗಿಲು ಹಾಕಲಾಗಿದೆ. ಹಾಗಾಗಿ ಗೋಡೆ ಹಾರಿ ಹೋಗುತ್ತೇನೆ ಎಂದಿದ್ದಾನೆ ಗಾಜಿ. ಗಾಜಿ ಮೂಲತಃ ಉತ್ತರ ಪ್ರದೇಶದವನಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...