alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡುಗರ ಎದೆ ನಡುಗಿಸುತ್ತೆ ವೈರಲ್ ಆಗಿರೋ ಈ ವಿಡಿಯೋ

ಅನಂತಪುರ: ನಸೀಬು ಸರಿಯಿದ್ದಾತ ಎಲ್ಲಿ ಸಿಕ್ಕಾಕಿಕೊಂಡರೂ ಬದುಕುತ್ತಾನೆ ಎಂಬುದಕ್ಕೆ ಇದೇ ಉದಾಹರಣೆಯಿರಬೇಕು. ಹಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಒಬ್ಬ ಪುಣ್ಯಾತ್ಮ ತನ್ನ ಮೇಲೆ ರೈಲು ಪಾಸಾದರೂ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ಕಾಪಾಡಿರುವುದು ಅಕ್ಷರಶಃ ಆತನ ಸಮಯಪ್ರಜ್ಞೆ. ಇದು ನಡೆದಿರುವುದು ಆಂಧ್ರಪ್ರದೇಶದ ಅನಂತಪುರದಲ್ಲಿ.

ಒಂದು ಫ್ಲಾಟ್ ಫಾರಂನಿಂದ ಮತ್ತೊಂದು ಫ್ಲಾಟ್ ಫಾರಂಗೆ ತಲುಪಲು ತರಾತುರಿಯಲ್ಲಿದ್ದಾತನೊಬ್ಬ ಹಳಿ ದಾಟುತ್ತಿದ್ದ ಸಂದರ್ಭ ಏಕಾಏಕಿ ರೈಲು ಬಂದಿದೆ. ತಪ್ಪಿಸಿಕೊಳ್ಳಲು ಜಾಗವೂ ಇರಲಿಲ್ಲ, ಸಮಯವೂ ಇರಲಿಲ್ಲ.

ಎಲ್ಲರೂ ಆತನ ಕಥೆ ಮುಗಿಯಿತು ಎಂದೇ ಅಂದುಕೊಂಡಿದ್ದರು. ತಕ್ಷಣ ತಲೆ ಓಡಿಸಿದ ಆತ ಆದದ್ದಾಗಲಿ ಎಂದು ರೈಲು ಹಳಿಯ ಮಧ್ಯೆ ಸಮಾನಾಂತರವಾಗಿ ಎದೆಯ ಮೇಲೆ ಕೈಇಟ್ಟು ಮಲಗಿದ್ದಾನೆ. ರೈಲು ಹಳಿಯ ಮೇಲೆ ತೆರಳಿದೆ. ಈತ ರೈಲಿನಡಿಯಲ್ಲಿ ಮಲಗಿದ್ದಾನೆ. ಜನ ಮೂಕವಿಸ್ಮಿತರಾಗಿ ನೋಡುತ್ತಿದ್ದಾರೆ. ರೈಲು ಮುಂದೆ ಹೋದ ಬಳಿಕ ಆತ ಒಂದು ಸಣ್ಣ ಗಾಯವೂ ಗಾಯವೂ ಇಲ್ಲದೆ ಎದ್ದಿದ್ದಾನೆ.

ಆತ ಧರಿಸಿದ್ದ ಬಿಳಿ ಅಂಗಿಯಲ್ಲಿ ಸಣ್ಣಪುಟ್ಟ ಕಲೆ ಆಗಿದ್ದು ಬಿಟ್ಟರೆ ಮತ್ತೇನೂ ಆಗಿಲ್ಲ. ನೆರೆದಿದ್ದವರಿಗೆ ಅಚ್ಚರಿಯೋ ಅಚ್ಚರಿ. ಇನ್ನು ಆತನ ಮುಖವಂತೂ ಬದುಕಿದೆಯಾ ಬಡ ಜೀವ ಎಂಬಂತಿತ್ತು. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಕಳೆದ ವಾರವಷ್ಟೇ ಚೆನ್ನೈ ರೈಲು ನಿಲ್ದಾಣದ ಫ್ಲಾಟ್ ಫಾರಂಗೆ ರೈಲು ಆಗಮಿಸುತ್ತಿದ್ದ ವೇಳೆ ಹಳಿಗೆ ಬೀಳಲಿದ್ದ ಪ್ರಯಾಣಿಕನೊಬ್ಬನನ್ನು ಆರ್ಪಿಎಫ್ ಸಿಬ್ಬಂದಿಯೊಬ್ಬರು ಕಾಪಾಡಿದ್ದ ದೃಶ್ಯ ಮೈ ಜುಂ ಅನ್ನುವಂತಿತ್ತು. ಇದೀಗ ಈ ದೃಶ್ಯ ಕೂಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...