alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಗುವ ಕೋಣೆಗೆ ಬಂದವನು ಬಾವಿಯಲ್ಲಿ ಬಿದ್ದಿದ್ಹೇಗೆ ಗೊತ್ತಾ?

bedroom

ನಾವೆಲ್ಲೋ ದೊಡ್ಡ ಬಾವಿಯಲ್ಲಿ ಬಿದ್ದಂತೆ, ಇನ್ನೇನೋ ಅನಾಹುತವಾದಂತೆ ಭಯಾನಕ ಕನಸುಗಳು ನಿದ್ದೆಯಲ್ಲಿ ನಮ್ಮನ್ನು ಕಾಡುತ್ತವೆ. ಆದ್ರೆ ನಿಜಜೀವನದಲ್ಲೇ ಇಂತಹ ಘಟನೆಗಳು ನಡೆದ್ರೆ ಹೇಗಿರುತ್ತೆ ಹೇಳಿ? ಚೆನ್ನೈನ ಅಂಬತೂರ್ ನಿವಾಸಿಯಾಗಿರೋ 69 ವರ್ಷದ ಎಲ್ ಐಸಿ ಏಜೆಂಟ್ ಚಂದ್ರಶೇಖರನ್ ಗೆ ಇದೇ ರೀತಿಯ ಅನುಭವವಾಗಿದೆ.

ಅಪಾರ್ಟ್ ಮೆಂಟ್ ನ ನೆಲಮಹಡಿಯಲ್ಲಿ ಚಂದ್ರಶೇಖರನ್ ಮನೆಯಿತ್ತು. ಬೆಡ್ ರೂಂ ತಲುಪಲು ಏಣಿ ಹತ್ತಿಕೊಂಡು ಹೋಗಬೇಕಿತ್ತು. ಚಂದ್ರಶೇಖರನ್ ಮೇಲಕ್ಕೇರಿ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಮಲಗುವ ಕೋಣೆಯ ನೆಲ ಕುಸಿದಿದೆ. ದೊಡ್ಡ ಹೊಂಡವೇ ನಿರ್ಮಾಣವಾಗಿಬಿಟ್ಟಿದೆ.

ಆ ಬಾವಿಯಲ್ಲಿ ಚಂದ್ರಶೇಖರನ್ ಬಿದ್ದುಬಿಟ್ಟಿದ್ದ. ಕೂಡಲೇ ಸಹಾಯಕ್ಕಾಗಿ ಪತ್ನಿಯನ್ನು ಕೂಗಿ ಕರೆದಿದ್ದ. ಧಾವಿಸಿ ಬಂದ ಆಕೆ ಕೂಡ ಆ ಹೊಂಡದೊಳಕ್ಕೆ ಬಿದ್ದುಬಿಟ್ಲು. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಪತಿ ಪತ್ನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ರು.

ಮನೆ ಕಟ್ಟಿದ್ದ ಜಾಗದಲ್ಲಿ ದೊಡ್ಡ ಬಾವಿಯಿತ್ತು. ಬಾವಿಯನ್ನು ಸರಿಯಾಗಿ ಮುಚ್ಚದೇ ಆ ಜಾಗದಲ್ಲಿ ಮನೆ ಕಟ್ಟಿದ್ರಿಂದ ಈ ಅನಾಹುತ ಸಂಭವಿಸಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಚಂದ್ರಶೇಖರನ್ ಮತ್ತವನ ಪತ್ನಿಗೆ ಯಾವುದೇ ಅಪಾಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...