alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಪ್ರೀತಿಗೆ ಮುಳ್ಳಾದ ತಂದೆ ಮಾಡಿದ್ದೇನು ಗೊತ್ತಾ?

20-1442724647-crime-12ಮಗಳ ಪ್ರೀತಿಯನ್ನು ತಿರಸ್ಕರಿಸಿದ ತಂದೆ, ಮಗಳು ಮತ್ತು ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಂಜಾಬಿನ ತರನತಾರನ್ ನ ಭಾಯೀ ಲಾಧೂ ಹಳ್ಳಿಯಲ್ಲಿ ನಡೆದಿದೆ.

ಡೋಗಾರ್ ಸಿಂಗ್ ಎಂಬ ವ್ಯಕ್ತಿಯೇ ತನ್ನ ಮಗಳಾದ ಸುಖವಿಂದರ್ ಕೌರ್ ಮತ್ತು ಆಕೆಯ ಪ್ರೇಮಿ ರಣದೀಪ್ ಸಿಂಗ್ ನನ್ನು ಕೊಲೆ ಮಾಡಿದ್ದಾನೆ. ಹೇರ್ ಕಟಿಂಗ್ ಮಾಡುವ ರಣದೀಪ್ ಸಿಂಗ್ ಮತ್ತು ಸುಖವಿಂದರ್ ಕೌರ್ ಒಬ್ಬರನ್ನೊಬ್ಬರು  ಪ್ರೀತಿಸುತ್ತಿದ್ದರು. ಇವರಿಬ್ಬರು ಪ್ರೀತಿಸುತ್ತಿರುವುದು ಡೋಗಾರ್ ಸಿಂಗ್ ಗೆ ಇಷ್ಟವಿರಲಿಲ್ಲವೆನ್ನಲಾಗಿದೆ.

ಭಾನುವಾರ ಮಾತನಾಡುವ ನೆಪದಲ್ಲಿ ರಣದೀಪ್ ಸಿಂಗ್ ನನ್ನು ಮನೆಗೆ ಕರೆಸಿಕೊಂಡ ಡೋಗಾರ್ ಸಿಂಗ್, ರಣದೀಪ್ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಮಗಳು ಸುಖವಿಂದರ್ ಬಂದ ವೇಳೆ ಡೋಗಾರ್ ಸಿಂಗ್, ಇಬ್ಬರಿಗೂ ಆಯುಧದಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಮಗಳು ಮತ್ತು ಆಕೆಯ ಪ್ರೇಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಡೋಗಾರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...