alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚು ಸಂಪಾದನೆ ಮಾಡಿದ್ದೇ ಕೊಲೆಗೆ ಕಾರಣವಾಯ್ತು…!

ಗ್ರೇಟರ್ ನೋಯ್ಡಾದಲ್ಲಿ ಪತಿಯೊಬ್ಬ ತನ್ನ ಇಂಜಿನಿಯರ್ ಪತ್ನಿಯನ್ನು ಹೊಡೆದು ಹೊಡೆದು ಕೊಲೆ ಮಾಡಿದ್ದಾನೆ. ಆಕೆ ಆತನಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದುದೇ ಇದಕ್ಕೆ ಕಾರಣವಾಗಿದೆ.

ಕುಲದೀಪ್ ಪತ್ನಿ ರೀಚಾಳನ್ನು ಹತ್ಯೆ ಮಾಡಿದ್ದಾನೆ. ಕುಲದೀಪ್ ಹಾಗೂ ರೀಚಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರೂ ಇಂಜಿನಿಯರಿಂಗ್ ಮುಗಿಸಿದ್ದರು. ಕುಲದೀಪ್ ಸಿವಿಲ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಕೆಲಸಕ್ಕೆ ಹೋಗದೆ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ರೀಚಾ ಕುಲದೀಪ್ ಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದಳು.

ಪದೇ ಪದೇ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕುಲದೀಪ್ ಮಾನಸಿಕವಾಗಿ ಸೋತಿದ್ದ. ಇದೇ ಕಾರಣಕ್ಕೆ ಪತ್ನಿಗೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಕುಲದೀಪ್ ಮನೆಯ ಶೌಚಾಲಯದಲ್ಲಿ ರೀಚಾ ಶವ ಸಿಕ್ಕಿದೆ. ಆದ್ರೆ ಈವರೆಗೂ ರೀಚಾ ಕುಟುಂಬದವರು ಯಾವುದೇ ದೂರು ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...