alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಿ ಪುತ್ರನನ್ನು ಅಪಹರಿಸಿದವರು ಕೊನೆಗೆ ಪಡೆದ ಹಣವೆಷ್ಟು ಗೊತ್ತಾ…?

ಜಿಮ್ ಗೆ ತೆರಳಿದ ಉದ್ಯಮಿಯೊಬ್ಬರ 36 ವರ್ಷದ ಪುತ್ರನನ್ನು, ಅವನದ್ದೇ ಬೆಂಜ್ ಕಾರಿನಲ್ಲಿ ಅಪಹರಿಸಿದ್ದ ಮೂವರು ಅಪಹರಣಕಾರರು ಒತ್ತೆ ಹಣ ಪಡೆದ ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಚಂಡೀಗಢದಲ್ಲಿ ಈ ಘಟನೆ ನಡೆದಿದ್ದು ಹರ್ ಪ್ರೀತ್ ಸಿಂಗ್ ಎಂಬಾತ ಜಿಮ್ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಬಲವಂತವಾಗಿ ಆತನ ಕಾರಿನೊಳಗೆ ನುಗ್ಗಿದ ಮೂವರು ಗನ್ ತೋರಿಸಿ ಬೆದರಿಕೆಯೊಡ್ಡಿದ್ದಾರೆ.

ಹರ್ ಪ್ರೀತ್ ಸಿಂಗ್ ಗೆ ಡ್ರೈವ್ ಮಾಡಲು ಸೂಚಿಸಿ ಹಲವು ಕಡೆ ಸುತ್ತಾಡಿಸಿದ್ದಾರೆ. ಬಳಿಕ ತಂದೆಗೆ ಪೋನ್ ಮಾಡಿ 2 ಕೋಟಿ ರೂ. ನೀಡುವಂತೆ ಹೇಳಲು ಸೂಚಿಸಿದ್ದಾರೆ. ಆದರೆ ತಂದೆ ಅನಾರೋಗ್ಯದ ಕಾರಣ ಹರ್ ಪ್ರೀತ್ ಸಿಂಗ್ ಪೋನ್ ಮಾಡಲು ನಿರಾಕರಿಸಿದ್ದು, ಸಂಬಂಧಿಕರು ಹಾಗೂ ಸ್ನೇಹಿತರಿಗಾದರೂ ಕರೆ ಮಾಡಿ ಕಡೇ ಪಕ್ಷ 25 ಲಕ್ಷವನ್ನಾದರೂ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅದರಂತೆ ಹರ್ ಪ್ರೀತ್ ಸಿಂಗ್ ಕರೆ ಮಾಡಿದ್ದು,  3 ಲಕ್ಷ ರೂ. ಗಳನ್ನಷ್ಟೇ ಹೊಂದಿಸಲು ಸಾಧ್ಯವಾಗಿದೆ. ಸದ್ಯ ಅಷ್ಟಾ ದರೂ ಸಿಕ್ಕಿತಲ್ಲವೆಂದು ತೃಪ್ತಿ ಪಟ್ಟುಕೊಂಡ ಅಪಹರಣಕಾರರು ಆತನನ್ನು ಇಳಿಸಿ ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ. ಬಿಡುಗಡೆಯಾಗುತ್ತಲೇ ಹರ್ ಪ್ರೀತ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಪಾಸಣೆ ಕೈಗೊಂಡ ವೇಳೆ ನಿರ್ಜನ ಪ್ರದೇಶವೊಂದರಲ್ಲಿ ಕಾರು ಪತ್ತೆಯಾಗಿದೆ. ಇದೀಗ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...