alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಿಹಾರ ಸಿಎಂಗೆ ಜೀವ ಬೆದರಿಕೆ ಹಾಕಿದ್ದ ವಿಡಿಯೋ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಪ್ರಮೋದ್ ಕುಮಾರ್ ಅಲಿಯಾಸ್ ಪೋಯಮ್ಮ ಬಂಧಿತ ಆರೋಪಿ. ಈತ ಪಾಟ್ನಾ ಜಿಲ್ಲೆಯ ಫತುಹಾ ಮೂಲದವನು.

ಸಿಎಂ ನಿತೀಶ್ ಕುಮಾರ್ ಮತ್ತವರ ಅಂಗರಕ್ಷಕರನ್ನು ಉಡಾಯಿಸಿಬಿಡ್ತೇನೆ ಅಂತಾ ಪ್ರಮೋದ್ ಕುಮಾರ್ ಹೇಳಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಪೊಲೀಸರು ಆತನನ್ನು ಹುಡುಕಿ ಅರೆಸ್ಟ್ ಮಾಡಿದ್ದಾರೆ.

ಸದ್ಯ ಬಿಹಾರದಲ್ಲಿ ಮರಳಿನ ಸಮಸ್ಯೆ ಇದೆ. ಇದರಿಂದ ಪ್ರಮೋದ್ ನ ಉದ್ಯಮಕ್ಕೆ ಹೊಡೆತ ಬಿದ್ದಿದೆಯಂತೆ ಅದೇ ಕಾರಣಕ್ಕೆ ಆತ ನಿತೀಶ್ ಕುಮಾರ್ ಮೇಲೆ ಸಿಟ್ಟಾಗಿದ್ದ. ನಿನ್ನೆಯಷ್ಟೆ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆ ಮೇಲೆ ದಾಳಿ ನಡೆದಿತ್ತು.

ಬುಕ್ಸಾರ್ ನಂದನ್ ಗ್ರಾಮದ ಬಳಿ ಕಲ್ಲು ತೂರಲಾಗಿತ್ತು. ಸಮೀಕ್ಷಾ ಯಾತ್ರೆಗಾಗಿ ಸಿಎಂ ನಿತೀಶ್ ತೆರಳುತ್ತಿದ್ರು. ಕಲ್ಲು ತೂರಾಟದಿಂದ ನಿತೀಶ್ ಕುಮಾರ್ ಗೆ ಯಾವುದೇ ಅಪಾಯವಾಗಿಲ್ಲ. ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...