alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನದ ನಂತ್ರ ಪತ್ನಿ ಬೆಡ್ ರೂಂನಲ್ಲಿ ಕ್ಯಾಮರಾ ಇಟ್ಟ ಪತಿ

ಪತಿ-ಪತ್ನಿ ಮಧ್ಯೆ ಕೆಲವೊಮ್ಮೆ ಸಂಶಯ ಬರೋದು ಸಾಮಾನ್ಯ ಸಂಗತಿ. ಕೆಲ ಪತಿ ಅಥವಾ ಪತ್ನಿಯರು ತಮ್ಮ ಸಂಗಾತಿ ಮೊಬೈಲ್ ಚೆಕ್ ಮಾಡುತ್ತಿರುತ್ತಾರೆ. ಪುಣೆಯಲ್ಲಿ ಪತ್ನಿ ಮೇಲೆ ಸಂಶಯಗೊಂಡ ಪತಿಯೊಬ್ಬ ಮನೆಗೆ ಹಿಡನ್ ಕ್ಯಾಮರಾ ಅಳವಡಿಸಿದ್ದಾರೆ. ವಾಟರ್ ಪ್ಯೂರಿಫೈಯರ್ ಬಳಿ ಸ್ಪೈ ಕ್ಯಾಮರಾ ಇಟ್ಟಿದ್ದಾನೆ.

ಅನೇಕ ವರ್ಷಗಳಿಂದ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪರಿಸ್ಥಿತಿ ಕೈ ಮೀರಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನದ ನಂತ್ರ ಪತಿ ಬೆಂಗಳೂರಿನಲ್ಲಿ ತಂದೆ-ತಾಯಿ ಜೊತೆ ವಾಸವಾಗಿದ್ದನಂತೆ. ಆಗಾಗ ಮಗನನ್ನು ನೋಡಲು ಮಹಿಳೆ ಮನೆಗೆ ಬರ್ತಿದ್ದನಂತೆ.

ಮಹಿಳೆ ಕೆಲಸಕ್ಕೆ ಹೋದ ಮೇಲೆ ಮಗನ ಜೊತೆ ಸಮಯ ಕಳೆಯುತ್ತಿದ್ದನಂತೆ. ಮಹಿಳೆ ಶೀಲವನ್ನು ಶಂಕಿಸಿದ್ದ ಪತಿ ಸಮಯ ನೋಡಿಕೊಂಡು ಬೆಡ್ ರೂಮಿನಲ್ಲಿರುವ ವಾಟರ್ ಫ್ಯೂರಿಫೈಯರ್ ಬಳಿ ಕ್ಯಾಮರಾ ಇಟ್ಟಿದ್ದಾನೆ. ಕಳೆದ ನಾಲ್ಕು ತಿಂಗಳಿಂದ ಕ್ಯಾಮರಾ ಎಲ್ಲ ಸಂಗತಿಯನ್ನು ದಾಖಲಿಸುತ್ತಿದೆ.

ಬಟ್ಟೆ ಬದಲಿಸುವ ವೇಳೆ ಮಹಿಳೆ ಕಣ್ಣಿಗೆ ಕ್ಯಾಮರಾ ಕಂಡಿದೆ. ಕ್ಯಾಮರಾ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...