alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬ್ ನ ಈ ಬಾಲಕರ ಹೆಸರು ಭಾರತ, ಪಾಕಿಸ್ತಾನ..!

sons

ಗಡಿಯಲ್ಲಿ ಭಾರತ-ಪಾಕಿಸ್ತಾನ ಮಧ್ಯೆ ಹಲವು ದಿನಗಳಿಂದ ಸಂಘರ್ಷ ನಡೆಯುತ್ತಲೇ ಇದೆ. ಈ ದ್ವೇಷದ ದಳ್ಳುರಿಗೆ ರಾಜಕೀಯ ದ್ವೇಷ ಇನ್ನಷ್ಟು ತುಪ್ಪ ಸುರಿದಿದೆ. ಆದ್ರೆ ಉಭಯ ರಾಷ್ಟ್ರಗಳ ಜನರಲ್ಲಿರುವ ಸಾಮರಸ್ಯ ಆಗಾಗ ಬೆಳಕಿಗೆ ಬರುತ್ತದೆ.

ಇತ್ತೀಚೆಗಷ್ಟೆ ಗ್ರೂಪ್ ಒಂದು ಉಭಯ ದೇಶಗಳ ರಾಷ್ಟ್ರಗೀತೆ ಹಾಡುವ ಮೂಲಕ ಶಾಂತಿಮಂತ್ರ ಜಪಿಸಿತ್ತು. ಪಂಜಾಬ್ ನ 40 ವರ್ಷದ ಕಾರ್ಪೆಂಟರ್ ಒಬ್ರು ತಮ್ಮ ಇಬ್ಬರು ಗಂಡು ಮಕ್ಕಳಿಗೆ ಭಾರತ ಮತ್ತು ಪಾಕಿಸ್ತಾನ ಅಂತಾ ಹೆಸರಿಟ್ಟಿದ್ದಾರೆ.

ಭಾರತ-ಪಾಕಿಸ್ತಾನ ಗಡಿಯಿಂದ 70 ಕಿಮೀ ದೂರದಲ್ಲಿ ಗುರ್ಮೀತ್ ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಹಾಗಾಗಿ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿದೆ. ಈ ಸಂಘರ್ಷ ಮರೆಯಾಗಿ, ಭಾರತ-ಪಾಕಿಸ್ತಾನದ ಮಧ್ಯೆ ಸ್ನೇಹ ಏರ್ಪಡಬೇಕು ಅನ್ನೋದು ಗುರ್ಮೀತ್ ಅವರ ಆಸೆ.

ಹಾಗಾಗಿ ತಮ್ಮ 11 ವರ್ಷದ ಮಗನಿಗೆ ಭಾರತ, 10 ವರ್ಷದ ಮಗನಿಗೆ ಪಾಕಿಸ್ತಾನ ಅಂತಾ ಹೆಸರಿಟ್ಟಿದ್ದಾರೆ. ಆದ್ರೆ ಶಾಲೆಯಲ್ಲಿ ಪ್ರವೇಶಾತಿ ವೇಳೆ ಪಾಕಿಸ್ತಾನ ಎಂಬ ಹೆಸರನ್ನು ಕರಣ್ ದೀಪ್ ಎಂದು ಅನಿವಾರ್ಯವಾಗಿ ಬದಲಾಯಿಸಬೇಕಾಯ್ತು. ಆದ್ರೂ ಮನೆಯಲ್ಲಿ ಎಲ್ರೂ ಆತನನ್ನು ಪಾಕಿಸ್ತಾನ ಎಂದೇ ಕರೆಯುತ್ತಾರಂತೆ. ತಮ್ಮ ಅಂಗಡಿಗೂ ಗುರ್ಮೀತ್, ಭಾರತ-ಪಾಕಿಸ್ತಾನ ವುಡ್ ವರ್ಕರ್ ಅಂತಾ ಹೆಸರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...