alex Certify
ಕನ್ನಡ ದುನಿಯಾ       Mobile App
       

Kannada Duniya

ಭೋಜನ ಸವಿದ ಅಮಿತ್ ಶಾಗೆ ಅರಿವಾಗಲಿಲ್ಲ ಕಾರ್ಯಕರ್ತನ ಸಂಕಷ್ಟ

amit-shah

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬವೊಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಔತಣ ಏರ್ಪಡಿಸಿತ್ತು. ಕಮಲ್ ಸಿಂಗ್ ಎಂಬ ಬಿಜೆಪಿ ಕಾರ್ಯಕರ್ತ ಪಕ್ಷದ ಅಧ್ಯಕ್ಷರಿಗೆ ಭೂರಿ ಭೋಜನ ಬಡಿಸಿದ್ದ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ರುಚಿಕರ ಭೋಜನ ಸವಿದ್ರು.

ಅನ್ನ, ದಾಲ್, ಬೆಂಗನ್ ಬರ್ತಾ, ಕಡಿ, ಶಿರಾ ಹೀಗೆ ವೆರೈಟಿ ವೆರೈಟಿ ತಿನಿಸುಗಳನ್ನು ಅಮಿತ್ ಶಾ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಗೆ ಮಾಡಿ ಬಡಿಸಲಾಗಿದೆ. ಆದ್ರೆ ಕಮಲ್ ಸಿಂಗ್ ಮನೆಯಲ್ಲಿ ಈವರೆಗೂ ಶೌಚಾಲಯವೇ ಇಲ್ಲ ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ.

ಮನೆಯಲ್ಲಿ ಶೌಚಾಲಯ ನಿರ್ಮಿಸಲು ಕಮಲ್ ಸಿಂಗ್ ಪಂಚಾಯ್ತಿ ನೆರವು ಕೇಳಿದ್ದಾರೆ. ಅರ್ಜಿ ಸಲ್ಲಿಸಿ 6 ತಿಂಗಳುಗಳೇ ಕಳೆದಿವೆ. ಆದ್ರೆ ಇದುವರೆಗೂ ಸರ್ಕಾರದಿಂದ ಬರಬೇಕಾದ ಹಣ ಅವರಿಗೆ ಸಿಕ್ಕಿಲ್ಲ. ಕಮಲ್ ಸಿಂಗ್ ರ ಪತ್ನಿ, ಮಕ್ಕಳು ಕೂಡ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ.

ತಾವೊಬ್ಬ ದಿನಗೂಲಿ ನೌಕರನಾಗಿದ್ದು, ಟಾಯ್ಲೆಟ್ ಕಟ್ಟಿಸಲು ಹಣವಿಲ್ಲ ಅಂತಾ ಕಮಲ್ ಸಿಂಗ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸ ಅಂದ್ರೆ 6 ತಿಂಗಳುಗಳ ಹಿಂದೆಯೇ ಭೋಪಾಲ್ ಜಿಲ್ಲೆ ಸಂಪೂರ್ಣ ಬಯಲು ಶೌಚ ಮುಕ್ತವಾಗಿದೆ ಅಂತಾ ಸರ್ಕಾರ ಹೇಳಿಕೊಂಡಿತ್ತು. ಆದ್ರೀಗ ಕಾರ್ಯಕರ್ತನ ಮನೆಯಲ್ಲಿ ಭೋಜನ ಮಾಡಿದ ಸಿಎಂ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಶೌಚಾಲಯದ ಅವ್ಯವಸ್ಥೆ ಅರಿವಾಗದೇ ಇರೋದು ದುರಂತ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...