alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಯಿಂದ ವಂಚಿತನಾಗಿದ್ದ ಈ ಯುವಕ ಗೂಗಲ್ ಗೆ ಕೇಳಿದ್ದ ಈ ಪ್ರಶ್ನೆ..!

pawanjeet-kohli

24 ವರ್ಷದ ಯುವಕ ಪ್ರಣವ್ ಜೀತ್ ಸಿಂಗ್ ಕೊಹ್ಲಿ ಯಾವಾಗ್ಲೂ ಖುಷಿ ಖುಷಿಯಾಗಿರ್ತಿದ್ದ. ಆತ ಪ್ರೇಮ ವೈಫಲ್ಯದಿಂದ ನೊಂದಿದ್ದಾನೆ ಅನ್ನೋ ಬಗ್ಗೆ ಕಿಂಚಿತ್ ಸುಳಿವು ಕೂಡ ಸ್ನೇಹಿತರಿಗೆ ಇರಲಿಲ್ಲ. ಇತ್ತೀಚೆಗಷ್ಟೆ ಆತನ ಮಾಜಿ ಪ್ರಿಯತಮೆಯ ನಿಶ್ಚಿತಾರ್ಥ ನೆರವೇರಿತ್ತು.

ಆಗ ಸತ್ತು ಬಿಡಬೇಕು ಅಂತಾ ಪ್ರಣವ್ ಜೀತ್ ನಿರ್ಧರಿಸಿದ್ದ. ಸೋಮವಾರ ಬೆಳಗ್ಗೆ ಬಾಂದ್ರಾ-ವರ್ಲಿ ಸೀ ಲಿಂಕ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಉದ್ಯಮದಲ್ಲಿ ಈತ ಯಶಸ್ಸು ಕಂಡಿದ್ದ. ಇತ್ತೀಚೆಗಷ್ಟೆ ತಂದೆ ಅವನಿಗೆ ಆಡಿ ಕಾರ್ ಕೂಡ ಕೊಡಿಸಿದ್ರು.

ಮನೆ, ಕಾರು, ಹಣ ಎಲ್ಲವೂ ಇತ್ತು. ಆದ್ರೆ ಪ್ರೇಮ ವೈಫಲ್ಯದಿಂದ ನೊಂದಿದ್ದ ಯುವಕನನ್ನು ಖಿನ್ನತೆ ಆವರಿಸಿತ್ತು. ಭಾನುವಾರ ಸಂಜೆ ಮನೆಯಿಂದ ಹೊರಟಿದ್ದ ಪ್ರಣವ್ ಜೀತ್, ತಡರಾತ್ರಿ 3 ಗಂಟೆ ವೇಳೆಗೆ ಕ್ಯಾಬ್ ಬುಕ್ ಮಾಡಿಕೊಂಡು ಹೊರಟಿದ್ದ.

ಬಾಂದ್ರಾ ವರ್ಲಿ ಬಂದರಿನ ಬಳಿ ಬರುತ್ತಿದ್ದಂತೆ ಮೂತ್ರ ವಿಸರ್ಜನೆ ಮಾಡಬೇಕು, 5 ನಿಮಿಷ ಕಾರು ನಿಲ್ಲಿಸು ಅಂತಾ ಚಾಲಕನಿಗೆ ತಿಳಿಸಿದ್ದಾನೆ. ನಂತರ ಸೀ ಲಿಂಕ್ ನ ರೇಲಿಂಗ್ ಅನ್ನು ಹಿಡಿದುಕೊಂಡು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಆತ ಅತ್ಯಂತ ವೇಗವಾಗಿ ಸಾಯೋದು ಹೇಗೆ ಅಂತಾ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ.

ಆತನ ಮೊಬೈಲ್ ಪರಿಶೀಲಿಸಿದ ಪೊಲೀಸರು ಈ ವಿಷಯ ತಿಳಿಸಿದ್ದಾರೆ. ಸೋಮವಾರ ಯುವಕನ ಶವ ಪತ್ತೆಯಾಗಿದ್ದು, ಕುಟುಂಬದವರು ಮತ್ತು ಸ್ನೇಹಿತರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...