alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ನೀಡಲು ಬಂದವನಿಂದ ಷೂ ಪಾಲೀಶ್ ಮಾಡಿಸಿಕೊಂಡ ಪೊಲೀಸರು

shoe polishತನ್ನ ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವೇಳೆ ಪೊಲೀಸರು ಆತನಿಂದ ಷೂ ಪಾಲೀಶ್ ಮಾಡಿಸಿಕೊಂಡು ದೂರು ಸ್ವೀಕರಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮುಜಫರ್ ನಗರದ ಚರ್ತವಾಲ್ ಪೊಲೀಸ್ ಠಾಣೆಗೆ 50 ವರ್ಷದ ಸೀತು ಎಂಬವರು ತಮ್ಮ ಮೊಬೈಲ್ ಕಳೆದುಹೋಗಿರುವ ಕುರಿತು ದೂರು ನೀಡಲು ಹೋಗಿದ್ದಾರೆ. ಈ ವೇಳೆ ಠಾಣೆಯ ರೈಟರ್, ಸೀತುವಿನ ಉದ್ಯೋಗದ ಕುರಿತು ಕೇಳಿದ್ದು, ಆತ ಚಮ್ಮಾರನೆಂದು ತಿಳಿಯುತ್ತಲೇ ತಮ್ಮ ಷೂ ಪಾಲೀಶ್ ಮಾಡಿಸಿಕೊಳ್ಳಲು ಅಲ್ಲಿನ ಪೊಲೀಸರು ಮುಂದಾಗಿದ್ದಾರೆ.

ಷೂ ಪಾಲೀಶ್ ಮಾಡಿದರೆ ಮಾತ್ರ ದೂರು ಸ್ವೀಕರಿಸುವುದಾಗಿ ಹೇಳಿದ್ದು, ಬಡಪಾಯಿ ಸೀತು ಪೊಲೀಸರು ಹೇಳಿದಂತೆ ಠಾಣೆಯಲ್ಲೇ ಅವರುಗಳ ಷೂ ಪಾಲೀಶ್ ಮಾಡಿದ್ದಾರೆ. ಆ ಬಳಿಕವಷ್ಟೇ ಅವರ ದೂರು ಸ್ವೀಕರಿಸಲಾಗಿದೆ. ಈ ಸಂದರ್ಭದಲ್ಲಿ ಠಾಣೆಯಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದನ್ನು ನೋಡಿದ ಸಾರ್ವಜನಿಕರು, ಪೊಲೀಸರ ಅಮಾನವೀಯ ವರ್ತನೆಗೆ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ತನಿಖೆಗೆ ಆದೇಶಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...