alex Certify
ಕನ್ನಡ ದುನಿಯಾ       Mobile App
       

Kannada Duniya

‘ಫೇಸ್ಬುಕ್’ ಗೆಳತಿಯನ್ನು ಭೇಟಿ ಮಾಡಲೋದವನ ಕಥೆ ಏನಾಯ್ತು ಗೊತ್ತಾ…?

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಗೆಳತಿಯನ್ನು ಪ್ರಥಮವಾಗಿ ಭೇಟಿ ಮಾಡಲು ಹೋದವನೊಬ್ಬನ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ. ಆಕೆಯ ಭೇಟಿಗೆಂದು ಹೋದಾಗಲೇ ದುಷ್ಕರ್ಮಿಗಳ ತಂಡವೊಂದು ತೀವ್ರವಾಗಿ ಹಲ್ಲೆ ನಡೆಸಿ ದುಬಾರಿ ಬೆಲೆಯ ಮೊಬೈಲ್ ಫೋನ್ ಸೇರಿದಂತೆ 5.92 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದೆ.

ಮುಂಬೈನಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ವ್ಯಕ್ತಿಯೊಬ್ಬ ಕೆಲ ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಚಾಟ್ ಹಾಗೂ ಮೊಬೈಲ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದ ಇವರಿಬ್ಬರು ಡೇಟಿಂಗ್ ಗೆ ಹೋಗಲು ತೀರ್ಮಾನಿಸಿದ್ದಾರೆ.

ಜನವರಿ 16 ರಂದು ಗೊವಂಡಿಗೆ ತೆರಳಲು ಇಬ್ಬರೂ ನಿರ್ಧರಿಸಿದ್ದು, ಯುವತಿಯನ್ನು ಕರೆದುಕೊಂಡು ಹೋಗಲು ಈ ವ್ಯಕ್ತಿ ಹೋಗಿದ್ದಾನೆ. ಆಕೆ ಹೇಳಿದ ಸ್ಥಳವನ್ನು ತಲುಪಿದಾಗ ಹುಡುಗಿಯೊಬ್ಬಳು ದೂರದಿಂದ ಹಾಯ್ ಮಾಡಿದ್ದು, ಆಕೆಯೇ ತನ್ನ ಫೇಸ್ ಬುಕ್ ಗೆಳತಿ ಎಂದು ಅರಿತ ವ್ಯಕ್ತಿ ಆಕೆಯ ಬಳಿ ಸಾಗಲು ಮುಂದಾಗುತ್ತಿದ್ದಂತೆಯೇ ಧುತ್ತೆಂದು ಆರು ಮಂದಿ ಪ್ರತ್ಯಕ್ಷರಾಗಿದ್ದಾರೆ.

ಗೆಳತಿಯನ್ನು ನೋಡುವ ಆತುರದಲ್ಲಿದ್ದ ವ್ಯಕ್ತಿಗೆ ರಾಡ್ ನಿಂದ ಹಿಗ್ಗಾಮುಗ್ಗಾ ಥಳಿಸಿದ ಈ ತಂಡ, ಆತನ ಬಳಿಯಿದ್ದ ಬೆಲೆ ಬಾಳುವ ವಸ್ತುಗಳನ್ನೆಲ್ಲಾ ದೋಚಿದೆ. ಪೊಲೀಸರಿಗೆ ದೂರು ನೀಡಿದರೆ ಕೊಂದು ಬಿಡುವುದಾಗಿ ಬೆದರಿಸಿ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಲ್ಲೆಗೊಳಗಾದ ವ್ಯಕ್ತಿ ಮಾರ್ಯದೆಗೆ ಅಂಜಿ ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ. ಕೊನೆಗೆ ಪರಿಚಿತರ ಒತ್ತಾಯದ ಮೇರೆಗೆ ಪ್ರಕರಣ ದಾಖಲಿಸಿದ್ದು, ಶನಿವಾರದಂದು ಮೂವರನ್ನು ಬಂಧಿಸಲಾಗಿದೆ.

ವ್ಯಕ್ತಿಯ ಫೇಸ್ ಬುಕ್ ಗೆಳತಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದು, ಆಕೆಯಿನ್ನೂ ಅಪ್ರಾಪ್ತೆಯೆನ್ನಲಾಗಿದೆ. ಈ ತಂಡದ ಜೊತೆ ಆ ಬಾಲಕಿಯೂ ಶಾಮೀಲಾಗಿರಬಹುದೆಂಬ ಶಂಕೆ ಹೊಂದಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...