alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್ವರ್ ಮದುವೆಯಾಗಲು 3 ಮಕ್ಕಳ ತಂದೆ ಇಂಥ ಕೆಲಸಕ್ಕಿಳಿದ…!

love_couple_1503223478_618x347

ದೆಹಲಿಯ ಅಮನ್ ವಿಹಾರ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಲವ್ವರ್ ಬೇಡಿಕೆ ಈಡೇರಿಸಲು ತಂದೆಯಾದವನು ಮಾಡಿದ ಕೆಲಸ ಪೊಲೀಸರಿಗೆ ಆಶ್ಚರ್ಯ ಹುಟ್ಟಿಸಿದೆ.

ಅಮನ್ ವಿಹಾನ್ ನಿವಾಸಿ 34 ವರ್ಷದ ಧರ್ಮವೀರ್ ಪತ್ನಿ ಹೆಪಟೈಟಿಸ್ ಬಿ ಯಿಂದಾಗಿ ಸಾವನ್ನಪ್ಪಿದ್ದಳು. ಜೂನ್ ನಲ್ಲಿ ಆಕೆ ಸಾವನ್ನಪ್ಪಿದ್ದು, ನಂತ್ರ ಇನ್ನೊಬ್ಬಳ ಜೊತೆ ಸಂಬಂಧ ಬೆಳೆಸಿದ್ದ ಧರ್ಮವೀರ್. ಆಕೆ ಮದುವೆಯಾಗಲು ಒಪ್ಪಿದ್ದಳಂತೆ. ಆದ್ರೆ ಮೂರು ಮಕ್ಕಳನ್ನು ನೋಡಿ ಕೊಳ್ಳುವುದಿಲ್ಲ ಎಂದಿದ್ದಳಂತೆ.

ಪ್ರೀತಿ ಹುಚ್ಚಿಗೆ ಬಿದ್ದಿದ್ದ ಧರ್ಮವೀರ್ ತನ್ನ ಮೂವರು ಮಕ್ಕಳನ್ನು ಕೊಲ್ಲಲು 30 ಸಾವಿರ ರೂಪಾಯಿ ಸುಪಾರಿ ನೀಡಿದ್ದ. ತನ್ನ ಸೋದರಳಿಯ ಸಂಜಯ್ ಗೆ ಧರ್ಮವೀರ್ ಸುಪಾರಿ ನೀಡಿದ್ದ. ಧರ್ಮವೀರ್ ಮಗಳನ್ನು ಕೊಲೆ ಮಾಡಿದ್ದ ಸಂಜಯ್ ಶವ ಮುಚ್ಚಿಡುವ ಪ್ರಯತ್ನ ಮಾಡಿದ್ದಾನೆ. ಆದ್ರೆ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಎಲ್ಲ ಪ್ರಕರಣ ಬಯಲಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...