alex Certify
ಕನ್ನಡ ದುನಿಯಾ       Mobile App
       

Kannada Duniya

37 ವರ್ಷದ ಹಿಂದಿನ ಪ್ರಕರಣದಲ್ಲಿ 40 ದಿನ ಜೈಲು ಶಿಕ್ಷೆ

ಭಾರತದಲ್ಲಿ ನ್ಯಾಯದಾನ ವಿಳಂಬ ಎಂಬ ಮಾತಿದೆ. ಇದಕ್ಕೆ ಉದಾಹರಣೆಯೆಂಬಂತೆ ವರ್ಷಾನುಗಟ್ಟಲೆ ಹಳೆಯದಾದ ಹಲವು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ನಡೆಯುತ್ತಿದೆ. 37 ವರ್ಷಗಳ ಪ್ರಕರಣವೊಂದರ ತೀರ್ಪು ಈಗ ಹೊರ ಬಿದ್ದಿದ್ದು, ಆರೋಪಿಗೆ 40 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬಂಧಿತನಾಗಿ 40 ದಿನಗಳ ಜೈಲು ವಾಸದ ಬಳಿಕ ಬಿಡುಗಡೆಯಾಗಿದ್ದ ಆತ ಮತ್ತೆ ಜೈಲಿಗೆ ಹೋಗುವ ಸಂದರ್ಭವಿಲ್ಲವಾದರೂ ಕೋರ್ಟ್ ವಿಚಾರಣೆಯಿಂದ ಮುಕ್ತನಾಗಿದ್ದಾನೆ.

ಜೂನ್ 14, 1980 ರಲ್ಲಿ ಉತ್ತರ ಪ್ರದೇಶದ ಅಜಂ ಘರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಕೊಲೆಯಾಗಿತ್ತು. ರಾಮ್ ಲಗನ್ ಎಂಬಾತನ ನಾಯಿ ದಾರಿಹೋಕ ತ್ರಿಭುವನ್ ಎಂಬಾತನನ್ನು ನೋಡಿ ಬೊಗಳಿತ್ತು. ಇದಕ್ಕೆ ಆಕ್ರೋಶಗೊಂಡ ತ್ರಿಭುವನ್, ನಾಯಿ ಮಾಲೀಕನೊಂದಿಗೆ ಜಗಳವಾಡಿದ್ದು, ಇದು ವಿಕೋಪಕ್ಕೆ ತಿರುಗಿ ತ್ರಿಭುವನ್ ತನ್ನ ಸ್ನೇಹಿತರೊಂದಿಗೆ ಮತ್ತೆ ಬಂದು ರಾಮ್ ಲಗನ್ ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತ ಕೆಲ ದಿನಗಳಲ್ಲೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತ್ರಿಭುವನ್ ಮತ್ತಾತನ ಸ್ನೇಹಿತರನ್ನು ಬಂಧಿಸಿ ಜೈಲಿಗಟ್ಟಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ತ್ರಿಭುವನ್ ಸೇರಿ ನಾಲ್ವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಇವರುಗಳು ಅಲಹಾಬಾದ್ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದಲ್ಲಿ ಇದರ ವಿಚಾರಣೆ ಬರೋಬ್ಬರಿ 24 ವರ್ಷಗಳ ಕಾಲ ನಡೆದಿತ್ತು. ಶಿಕ್ಷೆಗೊಳಗಾದವರೂ ಜಾಮೀನಿನ ಮೇಲೆ ಹೊರ ಬಂದಿದ್ದು, ಜೀವಾವಧಿ ಶಿಕ್ಷೆಗೊಳಗಾಗಿದ್ದವನಿಗೆ ಅಲಹಾಬಾದ್ ಹೈಕೋರ್ಟ್ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತಲ್ಲದೆ ಮೂವರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, 10 ವರ್ಷಗಳ ಬಳಿಕ ಇದರ ತೀರ್ಪು ಹೊರ ಬಿದ್ದಿದ್ದು, ಪ್ರಕರಣದಲ್ಲಿ ಬದುಕುಳಿದಿದ್ದ ಏಕೈಕ ಆರೋಪಿ ತ್ರಿಭುವನ್ ಗೆ 40 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...